ಸೋಮವಾರ, ಆಗಸ್ಟ್ 26, 2019
21 °C
ಪುಣೆ- –ಬೆಂಗಳೂರು ರಾಷ್ಟ್ರೀಯ ಹೆದ್ದಾರಿ

ಭೂಕುಸಿತ: ಸಂಚಾರ ಸ್ಥಗಿತ

Published:
Updated:
Prajavani

ಬೆಳಗಾವಿ: ಕೊಲ್ಹಾಪುರ ಜಿಲ್ಲೆಯಲ್ಲಿ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಪ್ರಮಾಣದ ಭೂ ಕುಸಿತ ಉಂಟಾಗಿದ್ದು,ಮಂಗಳವಾರ ಮಧ್ಯಾಹ್ನದ ವರೆಗೂ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ.

ಬೆಂಗಳೂರಿನಿಂದ ಬೆಳಗಾವಿ ಮಾರ್ಗವಾಗಿ ಪುಣೆಗೆ ಸಂಪರ್ಕಿಸುವ ಹೆದ್ದಾರಿ ಇದಾಗಿದೆ. ಬೆಳಗಾವಿಯಿಂದ ಕೊಲ್ಹಾಪುರ ಕಡೆಗೆ ಯಾರೂ ಪ್ರಯಾಣ ಮಾಡದಂತೆ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಮನವಿ ಮಾಡಿದ್ದಾರೆ.

‘ಸೋಮವಾರ ಸಂಜೆಯಿಂದಲೇ ರಾಜ್ಯದ ಗಡಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಮುಂದಿನ ಸೂಚನೆವರೆಗೆ ಬೆಳಗಾವಿಯಿಂದ ಕೊಲ್ಹಾಪುರ ಕಡೆಗೆ ಪ್ರಯಾಣಿಸದಿರುವುದು ಒಳಿತು’ ಎಂದು ಐಜಿಪಿ ತಿಳಿಸಿದ್ದಾರೆ.

Post Comments (+)