ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವಕರು ದೇಶದ ಪರಂಪರೆ ಮುಂದುವರಿಸಲಿ‘

Published 8 ನವೆಂಬರ್ 2023, 11:26 IST
Last Updated 8 ನವೆಂಬರ್ 2023, 11:26 IST
ಅಕ್ಷರ ಗಾತ್ರ

ಚಿಕ್ಕೋಡಿ: ‘ದೇಶವನ್ನು ಧಾರ್ಮಿಕ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಕಟ್ಟಲಾಗಿದೆ.  ಇಂದಿನ ಯುವಕರು ಸಂಸ್ಕಾರವಂತರಾಗಿ ಬೆಳೆದು ದೇಶದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು’
ಎಂದು ಜಮಖಂಡಿಯ ಸಹಜಾನಂದ ಅವಧೂತರು ಹೇಳಿದರು.

ತಾಲ್ಲೂಕಿನ ಅಂಕಲಿ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರುದ್ರಾವಧೂತ ಮಠದ ವಾರ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂಸ್ಕಾರದ ಕೊರತೆಯಿಂದ ಯುವಕರು ದಾರಿ ತಪ್ಪುತ್ತಿದ್ದಾರೆ. ಮೊಬೈಲ್ ವ್ಯಾಮೋಹದಿಂದ ಸಂಸ್ಕಾರಗಳನ್ನು ಮರೆತು, ದುಶ್ಚಟಗಳ ದಾಸರಾಗುತ್ತಿದ್ದಾರೆ. ಧಾರ್ಮಿಕ ಚಿಂತನೆಗಳು ಪದೇ ಪದೇ ನಡೆಯುವುದರಿಂದ ಯುವಕರನ್ನು ಸನ್ಮಾರ್ಗದಲ್ಲಿ ಕೊಂಡ್ಯೂಯಲು ಸಾಧ್ಯ’ ಎಂದರು.

ರುದ್ರಾವಧೂತ ಮಠದ ಕೃಷ್ಣಾನಂದ ಶ್ರೀಗಳು, ಗುರುಸೇವೆ ಮಾಡಿ ಜೀವನ ಪಾವನಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಕೋಳಿಗುಡ್ಡದ ಸಿದ್ಧಾರೂಢ ಶ್ರೀಗಳು, ‘ಮಾನವ ಧರ್ಮ ಶ್ರೇಷ್ಠವಾದ ಧರ್ಮ. ದಾನ ಧರ್ಮ ಮಾಡುವ ಮೂಲಕ ಪುಣ್ಯದ ಮಾರ್ಗ ಹಿಡಿಯಬೇಕು’ ಎಂದು ಹೇಳಿದರು.

ಲಿಂಗನೂರಿನ ಶ್ರೀಗಳು ಮಾತನಾಡಿದರು. ಈರಪ್ಪ ಮಾಳಿಗೆ, ತುಕಾರಾಮ ಕುರಣೆ, ಅನಿಲ ಬಡಿಗೇರ, ಬಾಳು ಕುರೆ, ಚಂದ್ರಕಾಂತ ಕುರೆ, ಅಮರ ನಡುಮನಿ, ಚಿದಾನಂದ ಕುರೆ, ಗಜಾನನ ವಗ್ಗೆ, ಸುಕುಮಾರ ಚಲವಾದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT