ಅತ್ಯಾಚಾರ ಎಸಗಿದವನಿಗೆ ಜೀವಾವಧಿ ಶಿಕ್ಷೆ

7

ಅತ್ಯಾಚಾರ ಎಸಗಿದವನಿಗೆ ಜೀವಾವಧಿ ಶಿಕ್ಷೆ

Published:
Updated:

ಬೆಳಗಾವಿ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈದ ಇಲ್ಲಿನ ವಿಜಯ ಕುಬೇರ ಮುಟ್ಟುಕೋಳಿ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ ₹ 20,000 ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶ ಜಿ.ನಂಜುಡಯ್ಯ ಆದೇಶ ಹೊರಡಿಸಿದರು.

2016ರ ಮಾರ್ಚ್‌ 5ರಂದು ವಿಜಯ 13 ವರ್ಷದ ಬಾಲಕಿಯನ್ನು ತನ್ನ ಬೆಡ್‌ರೂಮಿಗೆ ಕರೆದೊಯ್ದು, ಅತ್ಯಾಚಾರ ಎಸಗಿದ್ದ. ಪ್ರತಿರೋಧ ಒಡ್ಡಿದಾಗ ಬಾಲಕಿಯನ್ನು ಗೋಡೆಗೆ ನಿಲ್ಲಿಸಿ, ಕೈಯಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಶವದ ಗುರುತು ಸಿಗಬಾರದೆಂದು ವಿಜಯ ಪತ್ನಿ ಸುಜಾತ ಮುಖದ ಮೇಲೆ ಬಿಸಿನೀರು ಸುರಿದಿದ್ದರು. ವಿಲಾಸ ರಾಜಾರಾಮ ವಾಡಕರ ಮತ್ತು ಮೌಲಾ ಮಹಮ್ಮದ ಹುಸೇನ ಮನಿಯಾರ ಸಹಾಯದಿಂದ ಶವವನ್ನು ಬಟ್ಟೆಯಲ್ಲಿ ಸುತ್ತಿ, ರೈಲ್ವೆ ಹಳಿಯ ಮೇಲೆ ಇಡಲು ಹೋದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.

ವಿಚಾರಣೆ ವೇಳೆ ಅಪರಾಧ ಸಾಬೀತಾಗಿದ್ದರಿಂದ ಶಿಕ್ಷೆ ವಿಧಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದರು. ಸಾಕ್ಷಿಗಳನ್ನು ನಾಶಪಡಿಸಲು ಯತ್ನಿಸಿದ ಸುಜಾತ, ವಿಲಾಸ ರಾಜಾರಾಮ ವಾಡಕರ ಹಾಗೂ ಮೌಲಾ ಮಹಮ್ಮದ ಹುಸೇನ ಮನಿಯಾರ ಅವರಿಗೆ ತಲಾ 10 ವರ್ಷ ಜೈಲು ಶಿಕ್ಷೆ ಹಾಗೂ ₹ 10,000 ದಂಡ ವಿಧಿಸಿದ್ದಾರೆ. ಸರ್ಕಾರದ ಪರ ಎಲ್‌.ವಿ. ಪಾಟೀಲ ವಾದ ಮಂಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !