ಬೆಳಗಾವಿ: ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಇಂದು ನಡೆಯಲಿದೆ. 2,55,611 ಮತದಾರರಿದ್ದು, 902 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

ಬೆಳಿಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ಈ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಐವರು ಅವಿರೋಧ ಆಯ್ಕೆ: ‘ಮುಗಳಖೋಡ ಪುರಸಭೆಯಲ್ಲಿ 22ನೇ ವಾರ್ಡ್ನಿಂದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಕುಲಗೋಡ ಅವಿರೋಧ ಆಯ್ಕೆಯಾಗಿದ್ದಾರೆ. ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯ್ತಿಯಲ್ಲಿ 10, 12 ಹಾಗೂ 13ನೇ ವಾರ್ಡ್ಗಳಿಂದ ಪಕ್ಷೇತರ ಅಭ್ಯರ್ಥಿಗಳಾದ ಸುಶೀಲಾ ಗಣಾಚಾರಿ, ಪರ್ವೀನ್ ನಬೂವಾಲೆ ಮತ್ತು ಸಮೀರ್ ಪಟೇಲ್ ಕ್ರಮವಾಗಿ ಅವಿರೋಧ ಆಯ್ಕೆಗೊಂಡಿದ್ದಾರೆ. ಮೂಡಲಗಿ ಪುರಸಭೆಯ ವಾರ್ಡ್ ಸಂಖ್ಯೆ 9ಕ್ಕೆ ಉಪಚುನಾವಣೆ ನಿಗದಿಯಾಗಿತ್ತು. ಅಲ್ಲಿಯೂ ಬಿಜೆಪಿ ಅಭ್ಯರ್ಥಿ ಈರಪ್ಪ ಮುನ್ಯಾಳ ಅವಿರೋಧ ಆಯ್ಕೆಯಾಗಿದ್ದಾರೆ. ಅಧಿಕೃತ ಘೋಷಣೆ ಬಾಕಿ ಇದೆ’ ಎಂದು ಚುನಾವಣೆ ಶಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘301 ವಾರ್ಡ್ಗಳಿಗೆ ಚುನಾವಣೆ ನಡೆಯಲಿದ್ದು, 318 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕಾಂಗ್ರೆಸ್ನಿಂದ 228, ಬಿಜೆಪಿಯಿಂದ 268, ಜೆಡಿಎಸ್ನಿಂದ 37, ಬಿಎಸ್ಪಿಯಿಂದ ಮೂವರು, ಕೆಆರ್ಎಸ್ನಿಂದ ಇಬ್ಬರು, ಎಐಎಂಐಎಂನಿಂದ ಒಬ್ಬರು, ಆಮ್ ಆದ್ಮಿ ಪಕ್ಷದಿಂದ 18 ಹಾಗೂ 345 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

‘ಮತಗಟ್ಟೆಗಳಲ್ಲಿ ಕೊರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಅಗತ್ಯ ಸುರಕ್ಷತಾ ಕ್ರಮ ಅನುಸರಿಸಲಾಗುತ್ತಿದೆ. ಮತದಾರರು ಮಾರ್ಗಸೂಚಿ ಪಾಲನೆಗೆ ಒತ್ತು ನೀಡಬೇಕು’ ಎಂದು ಕೋರಿದ್ದಾರೆ.

ಕೊನೇ ಹಂತದ ಕಸರತ್ತು: ವಿಧಾನ ಪರಿಷತ್ ಚುನಾವಣೆ ಬೆನ್ನಲ್ಲೆ, ವಿವಿಧ ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳ ಚುನಾವಣೆಗೆ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅಧಿಸೂಚನೆ ಹೊರಡಿಸಿದ್ದರು. ಕೊರೊನಾ ಭೀತಿ ಮಧ್ಯೆಯೂ ಚುನಾವಣೆ ಅಖಾಡ ರಂಗೇರಿದ್ದು, ಭಾನುವಾರ ರಾತ್ರಿಯವರೆಗೂ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಕೊನೇ ಹಂತದ ಕಸರತ್ತು
ನಡೆಸುತ್ತಿರುವುದು ಕಂಡುಬಂತು. ಬಿಜೆಪಿ, ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತಿವೆ. ಪಕ್ಷೇತರರು ಇದಕ್ಕೆ ಅಡ್ಡಿಯಾಗಿದ್ದಾರೆ.

ಎಲ್ಲೆಲ್ಲಿ ಚುನಾವಣೆ?
ಪುರಸಭೆಗಳು: ಅಥಣಿ (27 ವಾರ್ಡ್), ಹಾರೂಗೇರಿ(23), ಮುಗಳಖೋಡ(23), ಮುನವಳ್ಳಿ(23), ಉಗಾರಖುರ್ದ್(23).
ಪಟ್ಟಣ ಪಂಚಾಯ್ತಿಗಳು: ಎಂ.ಕೆ.ಹುಬ್ಬಳ್ಳಿ(14), ಕಂಕಣವಾಡಿ(17), ನಾಗನೂರ(17), ಯಕ್ಸಂಬಾ(17), ಚನ್ನಮ್ಮ ಕಿತ್ತೂರು(18), ಅರಭಾವಿ(16), ಐನಾಪುರ(19), ಶೇಡಬಾಳ(16), ಚಿಂಚಲಿ(19), ಬೋರಗಾಂವ(17), ಕಲ್ಲೋಳಿ(16).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.