ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್: ಕಲ್ಲಂಗಡಿಗೆ ಸಿಗದ ಬೆಲೆ

Last Updated 12 ಮೇ 2021, 11:05 IST
ಅಕ್ಷರ ಗಾತ್ರ

ತೆಲಸಂಗ (ಬೆಳಗಾವಿ ಜಿಲ್ಲೆ): ಇಲ್ಲಿ ಮಾರಾಟ ಮಾಡಲೆಂದು ಕಿತ್ತು ಮರಗಳ ನೆರಳಲ್ಲಿ ಸಂಗ್ರಹಿಸಿಟ್ಟಿದ್ದ ಕಲ್ಲಂಗಡಿ ಹಣ್ಣುಗಳನ್ನು ರೈತರು ಕೇಳಿದವರಿಗೆ ಉಚಿತವಾಗಿ ವಿತರಿಸುತ್ತಿದ್ದಾರೆ.

ಕೋವಿಡ್ ಲಾಕ್‌ಡೌನ್‌ ಕಾರಣದಿಂದಾಗಿ ಬೆಲೆ ಕುಸಿತ ಉಂಟಾಗಿರುವುದರಿಂದ ರೈತರು, ತೋಟಕ್ಕೆ ಬಂದವರಿಗೆಲ್ಲ ಆಯ್ದುಕೊಂಡು ಹೋಗಿ ಎಂದು ಹೇಳುತ್ತಿದ್ದಾರೆ. ಕಲವೆಡೆ ಹಣ್ಣುಗಳು ತೋಟದಲ್ಲಿ ಕೊಳೆಯುತ್ತಿವೆ.

ಕಳೆದ ತಿಂಗಳು ಮಳೆ– ಗಾಳಿಗೆ ಅರ್ಧ ಇಳುವರಿಗೆ ಹೊಡೆತ ಬಿದ್ದಿತ್ತು. ಸದ್ಯ ಮಾರಾಟಕ್ಕೆ ಅವಕಾಶವಿಲ್ಲದೆ ತೊಂದರೆ ಆಗಿದೆ. ಕೆ.ಜಿ.ಗೆ ₹ 2 ಕೊಟ್ಟು ಖರೀದಿಸಿ ಒಯ್ಯಿರಿ ಎಂದರೂ ಸಗಟು ವ್ಯಾಪಾರಿಗಳು ಮಂದೆ ಬರುತ್ತಿಲ್ಲ. ಹೀಗಾಗಿ ಹಂಚುವುದು ಅನಿವಾರ್ಯವಾಗಿದೆ. ಕೆಲವರು ಕಟಾವು ಮಾಡಿದ್ದರೆ, ಕೆಲವರು ಬಳ್ಳಿಯಲ್ಲೇ ಬಿಟ್ಟಿದ್ದಾರೆ. ಆ ಹಣ್ಣುಗಳು ಹಾಳಾಗುತ್ತಿವೆ ಎನ್ನುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT