ಬೆಳಗಾವಿ: ಇಲ್ಲಿನ ಜಿಲ್ಲಾ ಔಷಧಿ ಉಗ್ರಾಣದ ಮೇಲೆ ಶನಿವಾರ ದಾಳಿ ಮಾಡಿದ ಲೋಕಾಯುಕ್ತರ ತಂಡ, ಅವಧಿ ಮೀರಿದ ಮತ್ತು ಬಳಕೆಗೆ ಸೂಕ್ತವಲ್ಲದ ಔಷಧಿಗಳ ಡಬ್ಬಿಗಳನ್ನು ಪತ್ತೆ ಮಾಡಿದೆ.

‘ಬಳ್ಳಾರಿಯಲ್ಲಿ ಬಾಣಂತಿಯರ ಸಾವಿಗೆ ಕಾರಣವಾಗಿದೆ ಎನ್ನಲಾದ ‘ಆರ್ಎಲ್ಎಸ್ ಐವಿ ಗ್ಲುಕೋಸ್’ನ ಸಾಕಷ್ಟು ಡಬ್ಬಿಗಳು ಪತ್ತೆಯಾಗಿವೆ. ಪಿಬಿಪಿ ಎಂಬ ಸಂಸ್ಥೆ ಇವುಗಳನ್ನು ಪೂರೈಸಿದೆ. ಅವು ಬಳಕೆಗೆ ಯೋಗ್ಯ ಇವೆ ಅಥವಾ ಇಲ್ಲವೇ ಎಂಬುದು ಖಾತ್ರಿ ಆಗಬೇಕಿದೆ. ಔಷಧಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

‘ಅಪಾರ ಪ್ರಮಾಣದ ಔಷಧಿಗಳ ಬಳಕೆ ಅವಧಿ ಮುಗಿದು ಎರಡು ವರ್ಷವಾಗಿದೆ. ಅವುಗಳನ್ನು ನಾಶ ಮಾಡಬೇಕಿತ್ತು. ಆದರೆ, ಏಕೆ ಅವುಗಳನ್ನು ಇಟ್ಟುಕೊಳ್ಳಲಾಗಿದೆ ಎಂಬ ಬಗ್ಗೆ ವಿಚಾರಣೆ ನಡೆಯಬೇಕಿದೆ. ಇದೇ ಔಷಧಿಗಳನ್ನು ರೋಗಿಗಳಿಗೆ ನೀಡಲಾಗಿದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ’ ಎಂದರು.

ಲೋಕಾಯುಕ್ತ ಡಿಎಸ್ಪಿ ಬಿ.ಎಸ್.ಪಾಟೀಲ, ಸಿಪಿಐ ನಿರಂಜನ ಪಾಟೀಲ ನೇತೃತ್ವದಲ್ಲಿ 8 ಸಿಬ್ಬಂದಿ ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.