ಎಂ.ಕೆ.ಹುಬ್ಬಳ್ಳಿ: ಪಟ್ಟಣದಲ್ಲಿ ತಲೆದೋರಿದ್ದ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ಬುಧವಾರ ಮುಕ್ತಿ ಸಿಕ್ಕಿದ್ದು, ಗ್ರಾಹಕರು ನಿಟ್ಟಿಸಿರು ಬಿಟ್ಟಿದ್ದಾರೆ.

ಬುಕ್ ಮಾಡಿ ವಾರ ಕಳೆದರೂ ಗ್ಯಾಸ್ ಸಿಲಿಂಡರ್ ಸಿಗದ ಪರಿಣಾಮ ಅಡುಗೆ ತಯಾರಿಕೆಗೆ ಪರದಾಡುತ್ತಿದ್ದ ಗ್ರಾಹಕರು, ಮಂಗಳವಾರ ಗ್ಯಾಸ್ ಏಜೆನ್ಸಿ ಎದುರು ಪ್ರತಿಭಟನೆ ನಡೆಸಿದ್ದರು.

ಪ್ರತಿ ದಿನ ಬೆಳಿಗ್ಗೆಯಿಂದ ಸಂಜೆ ತನಕ ಗ್ಯಾಸ್ ಏಜೆನ್ಸಿ ಬಳಿ ಖಾಲಿ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ಚಾತಕ ಪಕ್ಷಿಯಂತೆ ಕಾಯುತ್ತಿದ್ದೇವೆ. ಸಮರ್ಪಕ ಸಿಲಿಂಡರ್ ವಿತರಣೆ ಮಾಡಬೇಕೆಂದು ಗ್ರಾಹಕರು ಆಗ್ರಹಿಸಿದ್ದರು. ಗ್ಯಾಸ್ ವಿತರಣೆಯಲ್ಲಿ ಆಗುತ್ತಿರುವ ವಿಳಂಬಕ್ಕೆ ಆಕ್ರೋಶ ಹೊರಹಾಕಿದ್ದರು.

ಬುಧವಾರ ಬೆಳಿಗ್ಗೆಯೂ ಗ್ರಾಹಕರು ಗ್ಯಾಸ್ ವಿತರಣೆ ವಿಳಂಬಕ್ಕೆ ಬೇಸತ್ತು ಕೆಲಹೊತ್ತು ಗ್ಯಾಸ್ ಏಜೆನ್ಸಿ ಮುಂದಿನ ಎಂ.ಕೆ.ಹುಬ್ಬಳ್ಳಿ– ಬೈಲಹೊಂಗಲ ರಸ್ತೆ ತಡೆ ನಡೆಸಿದ್ದರು. ಸ್ಥಳಕ್ಕಾಗಮಿಸಿದ್ದ ಸ್ಥಳೀಯ ಉಪಠಾಣೆ ಪೊಲೀಸರು ಗ್ರಾಹಕರಿಗೆ ತಿಳಿಹೇಳಿ ಸಂಚಾರ ಸುಗಮಗೊಳಿಸಿದ್ದರು. ಈ ಬಗ್ಗೆ ಗಮನ ಹರಿಸಿದ ‘ಪ್ರಜಾವಾಣಿ’ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದಿತ್ತು. ಬುಧವಾರ ವರದಿ ಪ್ರಕಟಿಸಿತ್ತು.

ಜನರ ಸಮಸ್ಯೆಗೆ ಸ್ಫಂದಿಸಿದ ಕಿತ್ತೂರು ತಹಶೀಲ್ದಾರ್ ಕಲಗೌಡ ಪಾಟೀಲ, ಕೊಟ್ಟ ಭರವಸೆಯಂತೆ ಸಂಬಂಧಿತ ಗ್ಯಾಸ್ ಕಂಪನಿ ಅಧಿಕಾರಿಗಳಿಗೆ ಸೂಚಿಸಿ ಅಗತ್ಯ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡಿಸಿದ್ದಾರೆ. ಆಹಾರ ನಿರೀಕ್ಷಕ ವಸಂತ ಅರಶಿನಕರ್ ಹಾಗೂ ಪೊಲೀಸ್ ಸಿಬ್ಬಂದಿ ಹನುಮಂತ ದೇವಾಪುರ ಸಂಜೆವರೆಗೂ ಸ್ಥಳದಲ್ಲಿದ್ದು ಗ್ರಾಹಕರಿಗೆ ಸಮರ್ಪಕ ಗ್ಯಾಸ್ ಶಾಂತಿಯುತವಾಗಿ ವಿತರಣೆ ಮಾಡಿಸಿದ್ದಾರೆ. ಮುಂದೆ ಯಾವುದೇ ತೊಂದರೆಯಾಗದಂತೆ ಅಗತ್ಯ ಗ್ಯಾಸ್ ಸಿಲಿಂಡರ್ ವ್ಯವಸ್ಥೆ ಮಾಡಿಕೊಳ್ಳುವಂತೆ ಏಜೆನ್ಸಿಯವರಿಗೆ ಸೂಚಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-21-1799084996

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.