ಬೆಳಗಾವಿ: ನಗರದಲ್ಲಿ ಭಗವಾನ್ ಮಹಾವೀರ ಜನ್ಮಕಲ್ಯಾಣ ಮಹೋತ್ಸವ ಪ್ರಯುಕ್ತ ಸೋಮವಾರ ನಡೆದ ಶೋಭಾಯಾತ್ರೆ ಕಣ್ಮನಸೆಳೆಯಿತು.

ಇಲ್ಲಿನ ಟಿಳಕ ಚೌಕ್ನಲ್ಲಿ ಮೇಯರ್ ಪ್ರೀತಿ ಕಾಮಕರ ಮತ್ತು ಐಆರ್ಎಸ್ ನಿವೃತ್ತ ಅಧಿಕಾರಿ ನರೇಂದ್ರ ಜೈನ ಅವರು, ಶೋಭಾಯಾತ್ರೆಗೆ ಚಾಲನೆ ನೀಡಿದರು. ಅಲ್ಲಿಂದ ಶೇರಿ ಗಲ್ಲಿ, ಪಾಟೀಲ ಗಲ್ಲಿಯ ಶನಿ ಮಂದಿರ, ಕಪಿಲೇಶ್ವರ ರಸ್ತೆ, ಶಹಾಪುರ ಕೋರೆ ಗಲ್ಲಿ, ಎಸ್ಪಿಎಂ ರಸ್ತೆ, ಬಸವೇಶ್ವರ ವೃತ್ತದ ಮಾರ್ಗವಾಗಿ ಯಾತ್ರೆ ಸಾಗಿ ಹಿಂದವಾಡಿಯ ಮಹಾವೀರ ಭವನ ತಲುಪಿತು.

ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು, ಸುಡು ಬಿಸಿಲಲ್ಲೂ ಉತ್ಸಾಹದಿಂದ ಹೆಜ್ಜೆಹಾಕಿದರು. ಅದರಲ್ಲೂ ಯುವಜನರು, ಮಹಿಳೆಯರು ಕುಣಿದು ಕುಪ್ಪಳಿಸಿದರು.

35ಕ್ಕೂ ಅಧಿಕ ರೂಪಕ ವಾಹನ ಭಾಗವಹಿಸಿದ್ದವು. ಒಂದಕ್ಕಿಂತ ಇನ್ನೊಂದು ರೂಪಕ ಆಕರ್ಷಕವಾಗಿದ್ದವು. ಕೆಲ ರೂಪಕಗಳು ಜಲ ಸಂರಕ್ಷಣೆ, ಭೂಮಿ ಸಂರಕ್ಷಣೆ, ಪ್ರಾಣಿ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆ ಕುರಿತಾಗಿಯೂ ಜಾಗೃತಿ ಮೂಡಿಸಿದವು.

ಕಲಾವಿದರು ವಿವಿಧ ಕಲಾ ಪ್ರಕಾರಗಳನ್ನು ಪ್ರದರ್ಶಿಸಿ ರಂಜಿಸಿದರು. ಗ್ರಾಮೀಣ ಸಂಸ್ಕೃತಿ ಪ್ರತಿಬಿಂಬಿಸಿದರು. ಯಾತ್ರೆ ಮಾರ್ಗದಲ್ಲಿ ಹಲವರು ಕುಡಿಯುವ ನೀರು ಮತ್ತು ತಂಪು ಪಾನೀಯ ವಿತರಿಸಿದರು.

ಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅಭಯ ಪಾಟೀಲ, ‘ಬೆಳಗಾವಿಯಲ್ಲಿ 1999ರಿಂದ ದಿಗಂಬರ ಮತ್ತು ಶ್ವೇತಾಂಬರ ಜೈನರು ಒಗ್ಗಟ್ಟಿನಿಂದ ಭಗವಾನ್ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಈ ವರ್ಷ 35ಕ್ಕೂ ಹೆಚ್ಚು ರೂಪಕಗಳು ಮೆರವಣಿಗೆಯಲ್ಲಿ ಭಾಗವಹಿಸಿವೆ. ಎಲ್ಲ ಸಮುದಾಯದ ಜನರು ಮೆರವಣಿಗೆ ಅಂತ್ಯದವರೆಗೆ ಉತ್ಸಾಹದಿಂದ ಹೆಜ್ಜೆಹಾಕಬೇಕು’ ಎಂದರು.

‘ಆಕರ್ಷಕವಾದ ರೂಪಕಗಳನ್ನು ಸಿದ್ಧಪಡಿಸುವ ಮೂಲಕ ವಿವಿಧ ಮಂಡಳಗಳು ಈ ಮೆರವಣಿಗೆಗೆ ಕೊಡುಗೆ ನೀಡಿವೆ’ ಎಂದು ಶ್ಲಾಘಿಸಿದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ, ‘ಜೈನ ಸಮುದಾಯ ಜನಸಂಖ್ಯೆ ಕಡಿಮೆ ಇದ್ದರೂ, ಅಗತ್ಯವಿದ್ದಾಗ ಸಮಾಜದೊಂದಿಗೆ ಸದಾ ನಿಂತಿದೆ. ವಿವಿಧ ವರ್ಗಗಳ ಜನರ ಸಹಾಯಕ್ಕೆ ಬಂದಿದೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಅವರ ಸೇವೆ ಸ್ಮರಣೀಯ’ ಎಂದು ಪ್ರಶಂಸಿಸಿದರು.

‘ಇಡೀ ಮೆರವಣಿಗೆಯಲ್ಲಿ ಜನರು ಉತ್ಸಾಹದಿಂದ ಪಾಲ್ಗೊಳ್ಳಬೇಕು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಉಪಮೇಯರ್ ಹನುಮಂತ ಕೊಂಗಾಲಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನೀಲ ಹನುಮಣ್ಣವರ, ಮಾಜಿ ಶಾಸಕ ಸಂಜಯ ಪಾಟೀಲ, ರವಿರಾಜ ಪಾಟೀಲ, ರಾಜೇಂದ್ರ ಜೈನ ಕಟಾರಿಯಾ, ಶಿವನಗೌಡ ಪಾಟೀಲ ಇತರರಿದ್ದರು.

ಮಹಾವೀರ ಭವನದಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.