ಮಲೇಷಿಯಾ ನಿಯೋಗ ಸೌಹಾರ್ದ ಭೇಟಿ

7

ಮಲೇಷಿಯಾ ನಿಯೋಗ ಸೌಹಾರ್ದ ಭೇಟಿ

Published:
Updated:
Deccan Herald

ಬೆಳಗಾವಿ: ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿಗೆ ಮಲೇಷಿಯಾದ ಸೇನ್ಸ್ ವಿಶ್ವವಿದ್ಯಾಲಯದ ನಿಯೋಗವು ಶುಕ್ರವಾರ ಸೌಹಾರ್ದ ಭೇಟಿ ನೀಡಿ, ಪ್ರಾಚಾರ್ಯರು ಹಾಗೂ ಪ್ರಾಧ್ಯಾಪಕರೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿತು.

ಸಹಾಯಕ ಉಪಕುಲಪತಿ ಅಹಮ್ಮದ ಸಾದುಲ್ಲಾಹ, ಡೀನ್‌ಗಳಾದ ಶ್ರಪುಲ್ ಇಸ್ಮಾಯಿಲ್ ಹಾಗೂ ಮೊಹಮ್ಮದ್ ಸುಹಾಮಿಯ ಒಳಗೊಂಡ ನಿಯೋಗವು ಸಂಶೋಧನೆ ಹಾಗೂ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ವಿನಿಮಯ ಕಾರ್ಯಕ್ರಮ ಕುರಿತು ವಿಚಾರ ವಿನಿಮಯ ನಡೆಸಿತು.

ಪ್ರಾಚಾರ್ಯ ಬಸವರಾಜ ಕಟಗೇರಿ ಇಲ್ಲಿ ಸಂಶೋಧನೆಗೆ ಅವಶ್ಯವಿರುವ ಪೂರಕ ವಾತಾವರಣ ಹಾಗೂ ಶೈಕ್ಷಣಿಕ ಸಾಧನೆಗಳ ಬಗ್ಗೆ ತಿಳಿಸಿದರು.

ಕೆಎಲ್‌ಇ ಅಂತರರಾಷ್ಟ್ರೀಯ ವೈದ್ಯಕೀಯ ಕಾರ್ಯಕ್ರಮ ನಿರ್ದೇಶಕ ಡಾ.ಎಚ್.ಬಿ. ರಾಜಶೇಖರ, ಕಾಲೇಜಿನ ಡೀನ್‌ಗಳಾದ ರಾಜಕುಮಾರ ರಾಯ್ಕರ, ಮಹೇಶ ಕಾಮೋಜಿ, ಎಸ್.ಸಿ. ಮಾಳಿ, ಶ್ರೀಕಾಂತ ಜೋಶಿ, ಬಸವರಾಜ ಕೋಠಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !