ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸತ್‌ ಭವನದ ಮುಂದೆ ಮಲ್ಲಮ್ಮನ ಪುತ್ಥಳಿ: ಮನವಿ

Published : 1 ಅಕ್ಟೋಬರ್ 2024, 14:38 IST
Last Updated : 1 ಅಕ್ಟೋಬರ್ 2024, 14:38 IST
ಫಾಲೋ ಮಾಡಿ
Comments

ಬೆಳವಡಿ: ನವದೆಹಲಿಯ ನೂತನ ಸಂಸತ್‌ ಭವನದ ಮುಂದೆ ವೀರರಾಣಿ ಬೆಳವಡಿ ಮಲ್ಲಮ್ಮನ ಅಶ್ವಾರೂಢ ಪುತ್ಥಳಿ ಸ್ಥಾಪನೆ ಮಾಡಬೇಕು ಎಂದು ಕೋರಿ ಸಂಸದ ಜಗದೀಶ ಶೆಟ್ಟರ್‌ ನೇತೃತ್ವದಲ್ಲಿ, ವೀರರಾಣಿ ಬೆಳಗಡಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನದ ಸದಸ್ಯರು, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.

ಬೆಳವಡಿ ಮಲ್ಲಮ್ಮ ಧೀರ ಮಹಿಳೆ. 16ನೇ ಶತಮಾನದಲ್ಲಿ ಸುಮಾರು 2,000ಕ್ಕೂ ಹೆಚ್ಚು ಮಹಿಳೆಯರನ್ನು ಹೊಂದಿದ ಸೈನ್ಯ ಕಟ್ಟಿದ್ದಳು. ಇದು ವಿಶ್ವದ ಮೊದಲ ಮಹಿಳಾ ಸೈನ್ಯ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮಲ್ಲಮ್ಮನ ಸಾಧನೆಗಳನ್ನು ವಿಶ್ವಕ್ಕೆ ಪರಿಚಯಿಸುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಸಂಸತ್‌ ಭವನದ ಮುಂದೆ ಅವರ ಪುತ್ಥಳಿ ನಿರ್ಮಿಸಿದರೆ ಸಮಸ್ತ ಮಹಿಳಾ ಕುಲಕ್ಕೆ ಗೌರವ ಕೊಟ್ಟಂತಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮಲ್ಲಮ್ಮನ ಸಾಧನೆ ಬಿಂಬಿಸುವ 7 ನಿಮಿಷದ ಕಿರುಚಿತ್ರ ಹಾಗೂ ಕಿರುಹೊತ್ತಿಗೆಯನ್ನೂ ಅವರು ಸಚಿವರಿಗೆ ನೀಡಿದರು.

‘ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇನೆ’ ಎಂದು ಸಚಿವ ಪ್ರತಿಕ್ರಿಯಿಸಿದರು.

ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ್ ಪಾಟೀಲ ನಿಯೋಗದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಸವಿತಾ ಪಾಟೀಲ, ಉಪಾಧ್ಯಕ್ಷೆ ನೀಲವ್ವ ಕರಿಕಟ್ಟಿ, ಸದಸ್ಯೆ ಪಾರ್ವತಿ ಕರಿಕಟ್ಟಿ, ಕಾನೂನು ಸಲಹೆಗಾರ ರವೀಂದ್ರ ತೋಟಿಗೇರ, ಸಲಹೆಗಾರ ಪ್ರಕಾಶ ಐಹೊಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT