ಬುಧವಾರ, ಜುಲೈ 6, 2022
21 °C

ಸಹೋದರರ ಕಲಹ: ಕೊಲೆಯಲ್ಲಿ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕಾಕ: ಬುದ್ಧಿ ಮಾತು ಹೇಳಿದ ಸಹೋದರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಭಾನುವಾರ ರಾತ್ರಿ ನಗರದ ಕಿಲ್ಲೆಯ ಮನೆಯೊಂದರಲ್ಲಿ ನಡೆದಿದೆ. ಮುನಾಫ್ ರಫೀಕ್ ದೇಸಾಯಿ (24) ಕೊಲೆಯಾದವರು. ಮುನಾಫ್‌ ಅವರ ಹಿರಿಯ ಸಹೋದರ ರಮಜಾನ್ ರಫೀಕ್ ದೇಸಾಯಿ ಆರೋಪಿ.

ಕುಟುಂಬದ ಸದಸ್ಯರೊಂದಿಗೆ ರಾತ್ರಿ ಊಟ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ‘ನನಗಿಂತ ಕಿರಿಯ ನೀನು ನನಗೇ ಬುದ್ಧಿ ಹೇಳುವೆಯಾ‘ ಎಂದು ಜಗಳ ತೆಗೆದಿದ್ದಾನೆ, ಇದು ವಿಕೋಪಕ್ಕೆ ಹೋದಾಗ ಇರಿದಿದ್ದಾನೆ ಎನ್ನಲಾಗಿದೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು