ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಅಪಘಾತ: ರಸ್ತೆ ಪಾಲಾದ ಮಾವು

Published:
Updated:
Prajavani

ಬೆಳಗಾವಿ: ತಾಲ್ಲೂಕಿನ ಮುಕ್ತಿಮಠ ಬಳಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಂಗಳೂರಿನ ಕಡೆ ಹೋಗುತಿದ್ದ ಕಾರ್‌ನ ಚಕ್ರ ಸಿಡಿದ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ಇನ್ನೊಂದು ದಿಕ್ಕಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿಯಾದ್ದರಿಂದ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿತ್ತು.

ವಿಭಜಕದಿಂದ ಹಾರಿದ ಕಾರು ಮೀರಜ್ ಕಡೆಗೆ ಮಾವು ತುಂಬಿಕೊಂಡು ಸಾಗುತ್ತಿದ್ದ ಲಾರಿಗೆ ಡಿಕ್ಕಿಯಾಗಿ ಸರ್ವಿಸ್‌ ರಸ್ತೆಗೆ ಬಂದು ಬಿದ್ದಿದೆ. ಲಾರಿ ಚಾಲಕ ಹಾಗೂ ಕಾರಿನಲ್ಲಿದ್ದ ಗುಜರಾತ್‌ನವರಾದ ದಂಪತಿ ಹಾಗೂ ಮಗು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಉರುಳಿದ್ದರಿಂದ ಅದರಲ್ಲಿದ್ದ ಮಾವಿನಕಾಯಿ ಪೆಟ್ಟಿಗೆಗಳು ರಸ್ತೆಯಲ್ಲಿ ಬಿದ್ದಿದ್ದವು.

ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಕತಿ ಠಾಣೆ ಎಸ್‌ಐ ಅರ್ಜುನ ಹಂಚಿನಿಮನಿ ಸ್ಥಳಕ್ಕೆ ಭೇಟಿ ನೀಡಿದ್ದರು.

Post Comments (+)