ಗುರುವಾರ , ಜೂನ್ 30, 2022
27 °C

ನಿಪ್ಪಾಣಿ: ಲಾರಿ –ಕಾರಿನ ನಡುವೆ ಅಪಘಾತ, ಸ್ಥಳದಲ್ಲೇ ನಾಲ್ವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಸ್ಥವನಿಧಿ ಸಮೀಪದ ಸರ್ವಿಸ್‌ ರಸ್ತೆಯ ಅಮರ್ ಹೋಟೆಲ್ ಎದುರು ಲಾರಿ ಮತ್ತು ಕಾರಿನ ನಡುವೆ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಮೃತರನ್ನು ನಿಪ್ಪಾಣಿಯ ಸಾಯಿಶಂಕರ ನಗರದ ಅದಗೊಂಡ ಬಾಬು ಪಾಟೀಲ (60), ಛಾಯಾ ಅದಗೊಂಡ ಪಾಟೀಲ (55), ಮಹಾರಾಷ್ಟ್ರದ ರಾಧಾ ನಗರದ ಚಂಪಾತಾಯಿ ಬಾಳೆಷಾ ಮಗದುಮ್ಮ (85) ಮತ್ತು ಸದಲಗಾದ ಮಹೇಶ ದೇವಗೊಂಡ ಪಾಟೀಲ (28) ಎಂದು ಗುರುತಿಸಲಾಗಿದೆ ಎಂದು ನಿಪ್ಪಾಣಿ ಠಾಣೆ ಪೊಲೀಸರು ಮಾಹಿತಿ ನೀಡಿದರು.

ಘಟನೆಯಲ್ಲಿ ಕಾರು ನುಜ್ಜುಗುಜ್ಜಾಗಿದೆ. 

ನಿಪ್ಪಾಣಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಜೆಸಿಬಿಯಿಂದ ಕಾರನ್ನು ತೆರವುಗೊಳಿಸಲಾಗಿದೆ.  ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು