ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಾಲು ಉತ್ಪಾದಕರ ನೆರವಿಗೆ ಹಲವು ಯೋಜನೆ’

Last Updated 26 ಮೇ 2022, 13:54 IST
ಅಕ್ಷರ ಗಾತ್ರ

ಗೋಕಾಕ: ‘ಹಾಲು ಉತ್ಪಾದಕರಿಗಾಗಿ ಕೆಎಂಎಫ್ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು’ ಎಂದು ಕೆಎಂಎಫ್‌ ನಿರ್ದೇಶಕ ಅಮರನಾಥ ಜಾರಕಿಹೊಳಿ ಸಲಹೆ ನೀಡಿದರು.

ಇಲ್ಲಿನ ಯೋಗಿಕೊಳ್ಳ ರಸ್ತೆಯ ಶಾಸಕ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ಹಾಲು ಉತ್ಪಾದಕರ ಸಂಘದ ಸದಸ್ಯರಿಗೆ ಜಿಲ್ಲಾ ಹಾಲು ಒಕ್ಕೂಟದಿಂದ ನೀಡಲಾದ ಹಾಲು ಕರೆಯುವ ಹಾಗೂ ಮೇವು ಕಟಾವು ಯಂತ್ರ, ಮ್ಯಾಟ್ ಪರಿಕರವನ್ನು (ಶೇ 50ರಷ್ಟು ರಿಯಾಯಿತಿ ದರದಲ್ಲಿ) ಫಲಾನುಭವಿಗಳಿಗೆ ಗುರುವಾರ ವಿತರಿಸಿ ಮಾತನಾಡಿದರು.

ಶಾಸಕರ ಆಪ್ತಸಹಾಯಕ ಭೀಮನಗೌಡ ಪೊಲೀಸಗೌಡರ, ಒಕ್ಕೂಟದ ವ್ಯವಸ್ಥಾಪಕ ಯಾಸೀನ ಮುಲ್ಲಾ, ರವಿ ತಳವಾರ, ಸಚಿನ ಪಡದಲ್ಲಿ, ಎಸ್.ಬಿ. ಕರಬನ್ನವರ, ಎಂ.ಬಿ. ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT