‘ಮಾದಕ ದ್ರವ್ಯ ತ್ಯಜಿಸಿ’ ಜಾಗೃತಿ ಓಟ

7
ನೂರಾರು ಮಂದಿ ಭಾಗಿ, ವಿಜೇತರಿಗೆ ಬಹುಮಾನ

‘ಮಾದಕ ದ್ರವ್ಯ ತ್ಯಜಿಸಿ’ ಜಾಗೃತಿ ಓಟ

Published:
Updated:
Deccan Herald

ಬೆಳಗಾವಿ: ನಗರ ಪೊಲೀಸ್‌ ಆಯುಕ್ತಾಲಯ ಹಾಗೂ ಬೆಂಗಳೂರಿನ ಆರೋಹಣ ಸಂಸ್ಥೆ ವತಿಯಿಂದ ‘ಮಾದಕ ದ್ರವ್ಯ ತ್ಯಜಿಸಿ’ ಜಾಗೃತಿ ಓಟದ ಸ್ಪರ್ಧೆಯನ್ನು ಭಾನುವಾರ ಆಯೋಜಿಸಲಾಗಿತ್ತು.

ವಿವಿಧ ಶಾಲಾ–ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ನಾಗರಿಕರು, ಯುವಜನ ಸೇವಾ ಮತ್ತು ಕ್ರಿಡಾ ಇಲಾಖೆ ಹಾಸ್ಟೆಲ್‌ನ ವಿದ್ಯಾರ್ಥಿಗಳು ಸೇರಿ 400 ಮಂದಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 5 ಕಿ.ಮೀ. ಹಾಗೂ 10 ಕಿ.ಮೀ. ವಿಭಾಗದಲ್ಲಿ ಸ್ಪರ್ಧೆಗಳು ನಡೆದವು.

‌ಕ್ಲಬ್‌ ರಸ್ತೆಯಲ್ಲಿರುವ ಸಿಪಿಇಡಿ ಮೈದಾನದಿಂದ ಆರಂಭವಾದ ಸ್ಪರ್ಧೆಗೆ ಉತ್ತರ ವಲಯ ಐಜಿಪಿ ಅಲೋಕ್‌ಕುಮಾರ್‌ ಹಸಿರುನಿಶಾನೆ ತೋರಿದರು. ಪಾಲಿಕೆ ಆಯುಕ್ತ ಡಿ.ಸಿ. ರಾಜಪ್ಪ, ಡಿಸಿಪಿ ಸೀಮಾ ಲಾಟ್ಕರ್‌ ಭಾಗವಹಿಸಿದ್ದರು.

ಆರೋಹಣ ಸಂಸ್ಥೆ ಮುಖ್ಯಸ್ಥೆ ಮನಿಷಾ ಭಟ್ಟ ಸಿಪಿಇಡಿ ಮೈದಾನದಲ್ಲಿ ಜಂಬೋ ನೃತ್ಯ ಪ್ರದರ್ಶನದ ಮೂಲಕ, ಎಲ್ಲ ಅಧಿಕಾರಿ ಮತ್ತು  ಸಿಬ್ಬಂದಿಗೆ ವ್ಯಾಯಾಮ ಮಾಡಿಸಿದರು.

ಫಲಿತಾಂಶ: ಕ್ರಮವಾಗಿ 1ರಿಂದ 5ನೇ ಸ್ಥಾನ ಪಡೆದವರು.

5 ಕಿ.ಮೀ. ಓಟ: ಎಸ್.ಕೆ. ಯಾದವ, ಎಂ.ಎಸ್. ನಡಾಲ, ಎಂ.ಕೆ. ಭಿಶೊನಯ, ಮಂಜುನಾಥ ಜರ್ಸಿ, ನಿತಿನ ಜಾಧವ.

10 ಕಿ.ಮೀ. ಓಟ: ವೆಂಕಪ್ಪ ಡೊಳ್ಳಿನ, ಸೈದಪ್ಪ ಮ್ಯಾಗೇರಿ, ಸಿದ್ದಾರ್ಥ ದಿವಾಕರ, ವೇಣುಗೋಪಾಲ, ಗೋವಿಂದ ಜೋಶಿ.

ಪೊಲೀಸ್‌ ಅಧಿಕಾರಿಗಳ ವಿಭಾಗದಲ್ಲಿ ಮೊದಲ 3 ಬಹುಮಾನ ಪಡೆದವರು: ಉದ್ಯಮಬಾಗ್ ಇನ್‌ಸ್ಪೆಕ್ಟರ್ ನಿರಂಜನ ಪಾಟೀಲ, ಮಾರಿಹಾಳ ಇನ್‌ಸ್ಪೆಕ್ಟರ್ ವಿಜಯ ಎಸ್., ಸಿಎನ್‌ಎಸ್‌ ಪಿಐ ಬಿ.ಆರ್. ಗಡ್ಡೇಕರ.

 

 

 

 

 

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !