ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ್ಣುಗಳ ಬೇಡಿಕೆ ಹೆಚ್ಚಳ, ದರವೂ ಏರಿಕೆ

ರಂಜಾನ್‌ ಹಿನ್ನೆಲೆ ನಗರದ ಮಾರುಕಟ್ಟೆಗೆ ತರಹೇವಾರಿ ಖರ್ಜೂರಗಳ ಆಮದು
Last Updated 10 ಮೇ 2019, 8:20 IST
ಅಕ್ಷರ ಗಾತ್ರ

ಬೆಳಗಾವಿ: ಮುಸ್ಲಿಮರ ಪವಿತ್ರ ರಂಜಾನ್‌ ಉಪವಾಸ ವ್ರತಾಚರಣೆಯಹಿನ್ನೆಲೆಯಲ್ಲಿ ಈ ವಾರ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ.

ಉಪವಾಸದ ನಿಮಿತ್ತ ಖರ್ಜೂರಕ್ಜೆ ಬೇಡಿಕೆ ಅಧಿಕವಾಗಿದ್ದು, ಮಾರುಕಟ್ಟೆ ಹಾಗೂ ರಸ್ತೆಯ ಅಲ್ಲಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂತು. ಪ್ರತಿ ವರ್ಷದಂತೆ ಈ ವರ್ಷವೂಅರೇಬಿಯನ್‌ ರಾಷ್ಟ್ರಗಳಿಂದನಗರಕ್ಕೆ ತರಹೇವಾರಿ ಖರ್ಜೂರ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ.

‘ಕೆಮಿಯಾ, ಕಲ್ಮಿ, ಅಜುವಾ, ಡೇಟ್‌ ಕ್ರೌನ್‌ ಸೇರಿ ವಿವಿಧ ಬಗೆಯ ಖರ್ಜೂರಗಳನ್ನು ಖುಲ್ಲಾ ಹಾಗೂ ಪ್ಯಾಕ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆ.ಜಿ.ಗೆ ₹100ರಿಂದ ₹3,000 ತನಕ ದರವಿದೆ. ಈ ಸಲವ್ಯಾಪಾರ ಉತ್ತಮವಾಗಿ ನಡೆಯುತ್ತಿದೆ’ ಎಂದು ಖರ್ಜೂರ್‌ವ್ಯಾಪಾರಿ ಜೇನ್‌ ಶೇಖ್‌ ತಿಳಿಸಿದರು.

ಹಣ್ಣುಗಳಿಗೆ ಬೇಡಿಕೆ: ರಂಜಾನ್‌ ಹಿನ್ನೆಲೆಯಲ್ಲಿ ಬಾಳೆಹಣ್ಣು, ಮಾವು, ಸೇಬು, ಚಿಕ್ಕು ಹಣ್ಣು ಸೇರಿ ಇನ್ನಿತರ ಹಣ್ಣುಗಳಿಗೆ ಬೇಡಿಕೆ ಹೆಚ್ಚಿದ್ದು,ದರವೂ ಏರಿಕೆ ಕಂಡಿದೆ. ಜವಾರಿ ಬಾಳೆಹಣ್ಣು ಡಜನ್‌ಗೆ ₹30 ರಿಂದ ₹50 (₹25 ರಿಂದ ₹35 ಇತ್ತು) ಹಾಗೂ ಏಲಕ್ಕಿ ಬಾಳೆಹಣ್ಣು ಕೆ.ಜಿ.ಗೆ ₹60 ರಿಂದ ₹80ಕ್ಕೆ (₹40 ರಿಂದ ₹50 ಇತ್ತು) ಮಾರಾಟವಾಗುತ್ತಿದೆ.ಸೇಬು ಡಜನ್‌ಗೆ ₹100 ರಿಂದ ₹220, ಮಾವು ಡಜನ್‌ಗೆ ₹ 80 ರಿಂದ ₹400,ಚಿಕ್ಕು ಡಜನ್‌ಗೆ ₹80 ರಿಂದ ₹120 ದರವಿದೆ.

ಕಲ್ಲಂಗಡಿ, ಪಪ್ಪಾಯ, ಅನಾನಸ್‌, ದಾಳಿಂಬೆ ಹಣ್ಣುಗಳಿಗೂ ಬೇಡಿಕೆ ಇದ್ದು, ದರವೂ ₹10 ರಿಂದ ₹20ಗಳಷ್ಟು ಹೆಚ್ಚಳವಾಗಿದೆ.

ವಿಶೇಷ ಖಾದ್ಯ ಫಿರ್ನಿ: ರಂಜಾನ್‌ ಮಾಸದಲ್ಲಿ ಮುಸ್ಲಿಮರು ತಯಾರಿಸುವ ವಿಶೇಷ ಖಾದ್ಯವಾದ ಫಿರ್ನಿ ಇದೀಗ ನಗರದ ಹಲವೆಡೆ ಮಾರಾಟ ಮಾಡಲಾಗುತ್ತಿದೆ.‘ಹಾಲು, ಬಾದಾಮಿ, ಸೇಬು, ಬಾಳೆಹಣ್ಣು, ಪಿಸ್ತಾ, ಖರ್ಜೂರ್‌ ಹಾಗೂ ಇನ್ನಿತರ ಸಾಮಗ್ರಿಗಳನ್ನು ಸೇರಿಸಿ ‘ಫಿರ್ನಿ’ ತಯಾರಿಸಲಾಗುತ್ತಿದೆ. ಇದು ತುಂಬಾ ರುಚಿಯಾಗಿರುತ್ತದೆ. ಆರೋಗ್ಯಕ್ಕೂ ಉತ್ತಮ. ಉಪವಾಸ ಇರುವವರು ಸೇವಿಸುವುದರಿಂದ ದೇಹಕ್ಕೆ ಶಕ್ತಿ ಬರುತ್ತದೆ’ ಎಂದು ವ್ಯಾಪಾರಿ ನದೀಮ್ ಜಮಾದಾರ ತಿಳಿಸಿದರು.

ತರಕಾರಿ ದರದಲ್ಲಿ ವ್ಯತ್ಯಾಸ: ಟೊಮೆಟೊ, ಈರುಳ್ಳಿ, ಆಲೂಗಡ್ಡೆ, ಬದನೆಕಾಯಿ ದರದಲ್ಲಿ ₹3 ರಿಂದ ₹5 ಹೆಚ್ಚಳವಾಗಿದೆ. ಮೆಣಸಿನಕಾಯಿ ಬೆಲೆ ₹10 ಇಳಿಕೆಯಾಗಿದೆ. ಇನ್ನುಳಿದ ತರಕಾರಿಗಳ ದರ ಯಥಾಸ್ಥಿತಿಯಲ್ಲಿದೆ.

ಮೀನು ಮಾರಾಟದಲ್ಲಿ ಏರಿಳಿತವಾಗಿದ್ದು, ಬಾಂಗಡೆ ಮೀನು ಕೆ.ಜಿ.ಗೆ ₹180 ರಿಂದ ₹200 ಇದೆ (₹160 ರಿಂದ ₹200 ಇತ್ತು). ಸುರ್ಮಯಿ ₹600 ರಿಂದ ₹700, ತಾರ್ಲಿ ₹200, ಸೀಗಡಿ ಮೀನು ₹300 ರಿಂದ ₹350 ಇದೆ.

ಕೋಳಿ ಮಾಂಸ ಕೆ.ಜಿ.ಗೆ ₹190 ರಿಂದ ₹200, ಮಟನ್‌ ದರ ಕೆ.ಜಿ.ಗೆ ₹460 ರಿಂದ ₹480ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT