ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಟ್ಕಾ: ಆರು ಆರೋಪಿಗಳ ಬಂಧನ

Last Updated 1 ಅಕ್ಟೋಬರ್ 2020, 16:13 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಪೊಲೀಸರು ಮಟ್ಕಾ ಜೂಜಾಟದ ಅಡ್ಡೆ ಮೇಲೆ ಪ್ರತ್ಯೇಕ ದಾಳಿ ನಡೆಸಿ ಆರು ಮಂದಿ ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.

ಮಜಗಾವಿಯಲ್ಲಿ ಅದೇ ಗ್ರಾಮದ ಅಬ್ದುಲ್ ತಿಗಡಿ, ಮಚ್ಚೆಯ ಸುರೇಶ ಕರೆನ್ನವರ ಹಾಗೂ ರುಕ್ಮಿಣಿ ನಗರದ ವಾಸಿಂ ಹುಕ್ಕೇರಿ ಎನ್ನುವವರನ್ನು ಬಂಧಿಸಿ, ₹ 13,570, ಮೊಬೈಲ್ ಫೋನ್‌ ಮತ್ತು ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ.

ಖಡೇಬಜಾರ್‌ ಪೊಲೀಸರು, ಸ್ಟೇಷನ್‌ ರಸ್ತೆಯಲ್ಲಿ ಗಾಂಧಿನಗರದ ಮೆಹಬೂಬ ಶಿಲೇದಾರ, ಅಮನ್‌ ನಗರದ ಜಹೀರ್ ಸನದಿ ಮತ್ತು ಶಂಶುದ್ದೀನ್ ನಾಯಕ್‌ ಎನ್ನುವವರನ್ನು ಬಂಧಿಸಿ, ಅವರಿಂದ ₹ 5,150 ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT