ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕರು; ನೈಸರ್ಗಿಕ ಕೃಷಿಯಲ್ಲಿ ಎಂಬಿಎ ಪದವೀಧರ ‘ಖುಷಿ’

Last Updated 1 ಜನವರಿ 2022, 10:06 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಗೋಕಾಕ ತಾಲ್ಲೂಕಿನ ಹೊಸಯರಗುದ್ರಿಯ 31ರ ಹರೆಯದ ಕೃಷಿಕ ವೆಂಕಟೇಶ ಮೂಲಿಮನಿ ನೈಸರ್ಗಿಕ ಕೃಷಿಯಿಂದ ಗಮನಸೆಳೆದಿದ್ದಾರೆ.

ಎಂಬಿಎ ಪದವೀಧರರಾದ ಅವರು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸೀನಿಯರ್‌ ಟ್ಯಾಕ್ಸ್‌ ಅಸೋಸಿಯೇಟ್ ಆಗಿದ್ದರು. ಮೂರು ವರ್ಷ ಅಲ್ಲಿ ಕೆಲಸ ಮಾಡಿದ್ದರು. ಹಲವು ಕಾರಣಗಳಿಂದಾಗಿ ಐದು ವರ್ಷಗಳ ಹಿಂದೆ ಊರಿಗೆ ಬಂದು ಕೃಷಿ ಮಾಡುತ್ತಿದ್ದಾರೆ. ಕೆಲಸ ಬಿಟ್ಟು ಕೃಷಿ ಮಾಡಲು ಊರಿಗೆ ಬಂದ ವೆಂಕಟೇಶ ಅವರನ್ನು ಮೂದಲಿಸಿದವರೇ ಹೆಚ್ಚು. ಬಳಿಕ ಎಲ್ಲರೂ ಮೆಚ್ಚುವಂತೆ ಕೃಷಿ ಮಾಡುತ್ತಿದ್ದಾರೆ. ಹತ್ತು ಎಕರೆಯಲ್ಲೂ ನೈಸರ್ಗಿಕ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ. ಇದಕ್ಕಾಗಿಯೇ ಜಾನುವಾರು ಸಾಕಿದ್ದಾರೆ. ಅಕ್ಕಪಕ್ಕದ ರೈತರಿಂದ ದೇಶಿ ಹಸುಗಳ ಗಂಜಲವನ್ನು ಸಂಗ್ರಹಿಸುತ್ತಾರೆ. ಗೀರ್‌, ಕಿಲಾರಿ ಆಕಳುಗಳು ಮತ್ತು ಹೋರಿ ಸಾಕಿದ್ದಾರೆ. ಇವುಗಳಿಗೆ ಜಮೀ
ನಿನ ಒಂದು ಭಾಗದಲ್ಲಿ ಮೇ
ವಿನ ಬೆಳೆ ಬೆಳೆಯುತ್ತಿದ್ದಾರೆ.

ಕಬ್ಬನ್ನು ಕಾರ್ಖಾನೆಗೆ ಮಾರುವುದಿಲ್ಲ. ಗಾಣದಲ್ಲಿ ಬೆಲ್ಲ ಮಾಡಿಸುತ್ತಾರೆ. ಇವರು ಮಾಡಿಸುವ ಅಚ್ಚು ಮತ್ತು ಪುಡಿ ಬೆಲ್ಲಕ್ಕೆ ಉತ್ತಮ ಬೇಡಿಕೆ ಇದೆ. ಆನ್‌ಲೈನ್‌ನಲ್ಲಿ ಮಾರುಕಟ್ಟೆ ಕಂಡು ಕೊಂಡಿದ್ದಾರೆ. ಯೋಜನಾ ಬದ್ಧ ಕೃಷಿ ಮಾಡುತ್ತಾ, ಸರಳ ಜೀವನ ನಡೆಸುವವರಿಗೆ ಕೃಷಿ ಕಷ್ಟವಾಗುವುದಿಲ್ಲ ಎಂದು ರೈತರಿಗೆ ತಿಳಿಸುತ್ತಿದ್ದಾರೆ. ಅವರ ಕೃಷಿ ಸಾಧನೆಗೆ ಹಲವು
ಪ್ರಶಸ್ತಿ–ಪುರಸ್ಕಾರಗಳು ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT