ಸೋಮವಾರ, ಫೆಬ್ರವರಿ 24, 2020
19 °C
ರೈತರ ನಷ್ಟಕ್ಕೆ ಕಾರಣವಾದ ಪ್ಲಾಸ್ಟಿಕ್ ಹೂಗಳು!

ವೈದ್ಯ ವೃತ್ತಿ ತೊರೆದು ಕೃಷಿಗಿಳಿದ ಯುವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಅಥಣಿ: ತಾಲ್ಲೂಕಿನ ಮದಬಾವಿಯಲ್ಲಿ ವ್ಯಕ್ತಿಯೊಬ್ಬರು ವೈದ್ಯಕೀಯ ವೃತ್ತಿ ತೊರೆದು ಪ್ರಗತಿಪರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

40 ವರ್ಷ ವಯಸ್ಸಿನ ಸತೀಶ ಚೌಗಲಾ ಮಾದರಿ ಕೃಷಿಕನಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಎಂಬಿಬಿಎಸ್ ಪದವಿ ಪಡೆದಿರುವ ಅವರು, ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಇರುವುದರಿಂದ ವೈದ್ಯಕೀಯ ಹುದ್ದೆ ತೊರೆದು ಭೂಮಿತಾಯಿಯ ಸೇವೆಯಲ್ಲಿ ನಿರತವಾಗಿದ್ದಾರೆ.

‘ಜರ್ಬೆರಾ ಹೂವು ಬೆಳೆಯುತ್ತಿದ್ದೇನೆ. ಹಿಂದೆ ಒಂದು ಹೂವಿಗೆ ₹3ವರೆಗೂ ಸಿಗುತ್ತಿತ್ತು. ಆದರೆ, ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದಾದ ನಂತರ, ₹1.50 ಸಿಗುವುದೂ ಕಷ್ಟವಾಗಿದೆ. ಮೊದಲು ತಿಂಗಳಿಗೆ ₹2 ಲಕ್ಷ ಆದಾಯ ಬರುತ್ತಿತ್ತು. ಆದರೆ, ಈಗ ಅಷ್ಟು ಆದಾಯವಿಲ್ಲ. ಅದರಲ್ಲೂ ಪ್ಲಾಸ್ಟಿಕ್ ಹೂವುಗಳ ಹಾವಳಿಯಿಂದಾಗಿ, ಸಹಜ ಹೂವಿಗೆ ಬೇಡಿಕೆ ಕಡಿಮೆಯಾಗಿದೆ’ ಎನ್ನುತ್ತಾರೆ ಅವರು.

‘ಹಸಿರು ಮನೆಯಲ್ಲಿ ಹೂ ಬೆಳೆಯುವ ಅವರು, ಎರಡು ದಿನಕ್ಕೊಮ್ಮೆ 10ಸಾವಿರ ಹೂಗಳು ಬರುತ್ತವೆ. ಅವುಗಳನ್ನು ಮಹಾರಾಷ್ಟ್ರ, ಹೈದರಾಬಾದ್‌ಗೆ ಕಳುಹಿಸುತ್ತೇನೆ. ಸಿಕ್ಕಷ್ಟು ಪಡೆಯುತ್ತಿದ್ದೇವೆ’ ಎಂದು ತಿಳಿಸಿದರು.

ಪ್ಲಾಸ್ಟಿಕ್ ಹೂಗಳಿಂದ ಹೊಡೆತ:

‘ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಚೀನಾದ ಪ್ಲಾಸ್ಟಿಕ್‌ ಹೂಗಳು ಪುಷ್ಪ ಬೆಳೆಗಾರರು ನಷ್ಟ ಅನುಭವಿಸಲು ಕಾರಣವಾಗುತ್ತಿವೆ. ಈ ಅನುಭವ ನನಗೂ ಆಗಿದೆ’ ಎಂದು ಮಾಹಿತಿ ನೀಡಿದರು.

‘ಇಲ್ಲಿ ಹತ್ತು ಎಕರೆ ಜಮೀನಿದ್ದು, ಎಂಟು ಎಕರೆಯಲ್ಲಿ ಹೂವು, ದ್ರಾಕ್ಷಿ , ಕಬ್ಬು, ಬಾಳೆ ಕೃಷಿ ಮಾಡುತ್ತಿದ್ದೇನೆ. 30 ಕಡೆಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿದ್ದೇನೆ. ಇವುಗಳಲ್ಲಿ ಒಂದು ಕೋಟಿ ಲೀಟರ್‌ ಸಂಗ್ರಹಿಸಬಹುದು. ತಲಾ ಅರ್ಧ ಎಕರೆಯ ಮೂರು ಪ್ಲಾಟ್‌ಗಳಲ್ಲಿ ಗ್ರೀನ್‌ಹೌಸ್‌ ಇದೆ. ಅರ್ಧ ಎಕರೆಯಲ್ಲಿ ಚೆಂಡು ಹೂವಿಗಾಗಿ ಗ್ರೀನ್‌ಹೌಸ್ ಇದೆ’ ಎಂದು ವಿವರಿಸಿದರು.

‘ಇಪ್ಪತ್ತು ಮಂದಿ ಮಹಿಳೆಯರು ಹಾಗೂ ನಾಲ್ವರು ಪುರುಷರು ಕೆಲಸ ಮಾಡುತ್ತಾರೆ. ಕಬ್ಬು ಹಾಗೂ ದ್ರಾಕ್ಷಿಯಿಂದ ಆದಾಯಕ್ಕೇನೂ ತೊಡಕಿಲ್ಲ. ಯುವಜನರು ಕೃಷಿಯತ್ತ ಮುಖ ಮಾಡಬೇಕು’ ಎಂದರು.

‘ವೈದ್ಯರಾಗಿ ಕೈತುಂಬಾ ಸಂಬಳ ತೆಗೆದುಕೊಳ್ಳುವ ಅವಕಾಶವಿದ್ದರೂ ಅವರು ಕೃಷಿ ಮಾಡುತ್ತಿರುವುದು ಮಾದರಿಯಾಗಿದೆ’ ಎಂದು ಗ್ರಾಮದ ನಿವಾಸಿ ಮಾಹಾಂತೇಶ ನೇಜ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು