ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಲಹೆ

Last Updated 17 ಸೆಪ್ಟೆಂಬರ್ 2020, 6:21 IST
ಅಕ್ಷರ ಗಾತ್ರ

ತೆಲಸಂಗ: ‘ಅಂತರ ಕಾಯ್ದುಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್‌ ಬಳಸುವುದು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಮೂಲಕ ಕೋವಿಡ್‍–19ನಿಂದ ರಕ್ಷಿಸಿಕೊಳ್ಳೋಣ’ ಎಂದು ಕಕಮರಿಯ ಆತ್ಮಾರಾಮ ಸ್ವಾಮೀಜಿ ಹೇಳಿದರು.

ಗ್ರಾಮದ ಸಿದ್ದರಾಮೇಶ್ವರ ಮಠದ ಆವರಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜನರಿಗೆ ಆಯುರ್ವೇದ ಔಷಧಿಗಳನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.

‘ದೇಹದಲ್ಲಿ ರೋಗ ನಿರೋಧಕ ಶಕ್ತಿ ಇದ್ದರೆ ಮನುಷ್ಯ ಯಾವ ರೋಗಕ್ಕೂ ಹೆದರಬೇಕಿಲ್ಲ. ಹಿಂದೆ ಊರಿಗೊಂದು ಗರಡಿ ಮನೆ ಇರುತ್ತಿತ್ತು. ಸ್ಥಳೀಯರು ತಾಲೀಮು ನಡೆಸುತ್ತಿದ್ದರು. ಇದರಿಂದ ಜಟ್ಟಿಗಳಾಗಿರುತ್ತಿದ್ದರು. ಈಗ ಊರಿಗೊಂದು ಮದ್ಯದಂಗಡಿ ತೆಗೆದ ಪರಿಣಾಮ ಗ್ರಾಮೀಣ ಸೊಗಡು ಮಾಯವಾಗಿ ವ್ಯಸನಿಗಳು ಹೆಚ್ಚುತ್ತಿದ್ದಾರೆ. ಇದರಿಂದ ದೇಶದ ಆರೋಗ್ಯವೂ ಕೆಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಕುಂಬಾರ ಗುರುಪೀಠದ ಬಸವಗುಂಡಯ್ಯ ಸ್ವಾಮೀಜಿ ಮತ್ತು ಹೊನವಾಡದ ಬಾಬುರಾವ ಮಹಾರಾಜ ಮಾತನಾಡಿದರು. ಹಿರಿಯರಾದ ಅಶೋಕ ಉಂಡೋಡಿ, ಅರವಿಂದ ಉಂಡೋಡಿ, ಅಣ್ಣು ಸಾವಳಗಿ, ಡಾ.ಬಿ.ಎಸ್. ಕಾಮನ್, ಗುರುರಾಜ ಕುಂಬಾರ, ಮಲ್ಲಿಕಾರ್ಜುನ ಹತ್ತಿ, ವಕೀಲ ಅಮೋಘ ಖೊಬ್ರಿ, ಸುರೇಶ ಸನಗೊಂಡ, ಮಹಾದೇವ ಸಕ್ರಿ, ಶಿವಯೋಗಿ ಹತ್ತಿ, ಈಶ್ವರ ಉಂಡೋಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT