ಬೆಳಗಾವಿ: ಹಿಪ್ಪರಗಿ ಬ್ಯಾರೇಜಿನಲ್ಲಿ (ಕೃಷ್ಣಾ ನದಿ) ಸಂಗ್ರಹಿಸಿದ ನೀರು ಕೇವಲ 100 ದಿನಕ್ಕೆ ಮಾತ್ರ ಸಾಲುತ್ತದೆ. ಮುಂದಿನ ಏಪ್ರಿಲ್, ಮೇ ತಿಂಗಳಲ್ಲಿ ಸಂಕಷ್ಟ ಎದುರಾಗಬಹುದು. ಈ ಕುರಿತು ಮತ್ತೊಮ್ಮೆ ಸಭೆ ಕರೆದು ಚರ್ಚಿಸಲಾಗುವುದು ಎಂದು ಪ್ರಾದೇಶಿಕ ಆಯುಕ್ತರಾದ ಸಂಜಯ ಶೆಟ್ಟೆಣ್ಣವರ ತಿಳಿಸಿದರು.
ನಗರದಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾಹಿತಿ ಸಂಗ್ರಹಿಸಿದರು.
‘ಪ್ರಸ್ತುತ ಹಿಪ್ಪರಗಿ ಬ್ಯಾರೇಜಿನಲ್ಲಿನ ಸಂಗ್ರಹಿತವಾದ ನೀರಿನ ಪ್ರಮಾಣ 5.80 ಟಿ.ಎಂ.ಸಿ ಅಡಿ ಇದೆ. ಡೆಟ್ ಸ್ಟೋರೇಜ್ ಹಾಗೂ ಭಾಷ್ಟೀಭವನ ಹಿಡಿದು ಬ್ಯಾರೇಜಿನಲ್ಲಿ ಉಪಯುಕ್ತ ನೀರಿನ ಪ್ರಮಾಣ ಕೇವಲ 5 ಟಿಎಂಸಿ ಅಡಿ’ ಎಂದು ಅಧಿಕರಿಗಳು ತಿಳಿಸಿದರು.
‘ಉಪಯುಕ್ತ ನೀರು ಕುಡಿಯುವ ಉದ್ದೇಶಕ್ಕಾಗಿ ಫೆಬ್ರುವರಿ 2024 ವರೆಗೆ ಅಂದರೆ 100 ದಿವಸಗಳವರೆಗೆ ಮಾತ್ರ ಸಾಕಾಗುತ್ತದೆ. 2024ರ ಮಾರ್ಚ್ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬನವಾಗಲಿದೆ. ಈ ಹಿನ್ನೆಲೆಯಲ್ಲಿ ಹಿಪ್ಪರಗಿ ಬ್ಯಾರೇಜಿನ ನದಿ ಪಾತ್ರದಲ್ಲಿನ ರೈತರ ಪಂಪ್‌ಸೆಟ್‌ಗಳ ವಿದ್ಯುತ್ ನಿಲುಗಡೆಯನ್ನು ವಾರಕ್ಕೆ 2 ದಿನ ಮಾಡುವ ಸಂದರ್ಭ ಉಂಟಾಗಬಹುದು’ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.