ಶುಕ್ರವಾರ, ನವೆಂಬರ್ 15, 2019
22 °C

ಅಧಿಕಾರ ಚಲಾಯಿಸಿದ ಸದಸ್ಯೆಯರ ಗಂಡಂದಿರು!

Published:
Updated:
Prajavani

ಅಥಣಿ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿ ನಡೆದ ತಾಲ್ಲೂಕಿನ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿಯ ಇಬ್ಬರು ಸದಸ್ಯೆಯರ ಗಂಡಂದಿರು ಪಾಲ್ಗೊಂಡಿದ್ದುದು ಚರ್ಚೆಗೆ ಗ್ರಾಸವಾಗಿದೆ.

ಪುಟ್ಟರಾಜಮ್ಮ ತುಗಶೆಟ್ಟಿ ಗೈರು ಹಾಜರಾಗಿದ್ದರು. ಈ ಅವಕಾಶ ಬಳಸಿಕೊಂಡು ಅವರ ಪತಿ, ಮುಖಂಡ ಶ್ರೀಶೈಲ ತುಗಶೆಟ್ಟಿ ಭಾಗವಹಿಸಿದ್ದರು. ಅದೇ ರೀತಿ ಸದಸ್ಯೆ ಶಕುಂತಲಾ ದಿವಾನಮಾಳ ಪರವಾಗಿ ಪತಿ ಶಿವಾನಂದ ದಿವಾನಮಾಳ ವೇದಿಕೆಯಲ್ಲಿ ಕುಳಿತಿದ್ದರು. ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದರು!

ಚುನಾಯಿತಿ ಜನಪ್ರತನಿಧಿ ಅಲ್ಲದಿದ್ದರೂ, ನಿಯಮವನ್ನು ಉಲ್ಲಂಘಿಸಿದ್ದಾರೆ. ಇದಕ್ಕೆ ಅಧಿಕಾರಿಗಳು ಪ್ರತಿರೋಧವನ್ನೇ ವ್ಯಕ್ತ‍ಪಡಿಸಿಲ್ಲ. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯೂ ಪ್ರಶ್ನಿಸಿಲ್ಲ ಎನ್ನಲಾಗಿದೆ.

ತಾಲ್ಲೂಕು ಪಂಚಾಯ್ತಿ ಇಒ ರವಿ ಬಂಗಾರೆಪ್ಪನವರ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)