ಸ್ಥಳೀಯ ಸಂಸ್ಥೆಗಳ ಚುನಾವಣೆ ಮತದಾನ; ಪುರುಷರೇ ಹೆಚ್ಚು

7

ಸ್ಥಳೀಯ ಸಂಸ್ಥೆಗಳ ಚುನಾವಣೆ ಮತದಾನ; ಪುರುಷರೇ ಹೆಚ್ಚು

Published:
Updated:

ಬೆಳಗಾವಿ: ಜಿಲ್ಲೆಯ 14 ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ 72.05 ರಷ್ಟು ಮತದಾನವಾಗಿದೆ. ಮತದಾರರ ಸಂಖ್ಯೆಯಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚಾಗಿದ್ದರೂ, ಮತ ಚಲಾವಣೆಯಲ್ಲಿ ಅವರಿಗಿಂತ ಹಿಂದೆ ಬಿದ್ದಿದ್ದಾರೆ. ಪುರುಷರು ಶೇ 72.65ರಷ್ಟು ಮತ ಚಲಾಯಿಸಿದ್ದರೆ, ಮಹಿಳೆಯರು ಶೇ 71.45ರಷ್ಟು ಮತ ಚಲಾಯಿಸಿದ್ದಾರೆ. ಶೇ 1.2ರಷ್ಟು ಕಡಿಮೆಯಾಗಿದ್ದಾರೆ.

ಜಿಲ್ಲೆಯ ಒಟ್ಟು 3,97,544 ಮತದಾರರು ಇದ್ದಾರೆ. ಇವರ ಪೈಕಿ 2,80,570 ಜನರು ಮತ ಚಲಾಯಿಸಿದ್ದಾರೆ. 1,97,327 ಪುರುಷ ಮತದಾರರಲ್ಲಿ 1,40,531 ಜನರು ಮತ ಚಲಾಯಿಸಿದ್ದಾರೆ. 2,00,217 ಮಹಿಳಾ ಮತದಾರರ ಪೈಕಿ 1,40,039 ಮಹಿಳೆಯರು ಮತ ಚಲಾಯಿಸಿದ್ದಾರೆ.

ಚಿಕ್ಕೋಡಿಯಲ್ಲಿ ಹೆಚ್ಚು: ಪುರುಷರಿಗೆ ಹೋಲಿಸಿದರೆ ಚಿಕ್ಕೋಡಿ ಪುರಸಭೆಯಲ್ಲಿ ಮಾತ್ರ ಮಹಿಳೆಯರು ಹೆಚ್ಚು ಮತ ಚಲಾಯಿಸಿದ್ದಾರೆ. 12,317 ಪುರುಷರು ಮತ ಚಲಾಯಿಸಿದ್ದರೆ, 12,661 ಮಹಿಳೆಯರು ಮತ ಚಲಾಯಿಸಿದ್ದಾರೆ. ಇನ್ನುಳಿದಂತೆ ಎಲ್ಲ ಸಂಸ್ಥೆಗಳಲ್ಲಿ ಪುರುಷರೇ ಮುಂದಿದ್ದಾರೆ.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !