ರೈತರಿಂದ ಹಾಲು ಖರೀದಿ: 75 ಪೈಸೆ ಹೆಚ್ಚಳ

ಸೋಮವಾರ, ಜೂನ್ 24, 2019
29 °C
ಬೆಮುಲ್‌ ಅಧ್ಯಕ್ಷರ ಮಾಹಿತಿ

ರೈತರಿಂದ ಹಾಲು ಖರೀದಿ: 75 ಪೈಸೆ ಹೆಚ್ಚಳ

Published:
Updated:
Prajavani

ಬೆಳಗಾವಿ: ‘ಹಾಲು ಖರೀದಿ ದರವನ್ನು ಮಂಗಳವಾರದಿಂದಲೇ ಅನ್ವಯವಾಗುವಂತೆ ಪರಿಷ್ಕರಿಸಲಾಗಿದ್ದು, ಉತ್ತಮ ಗುಣಮಟ್ಟದ ಹಾಲು ಪೂರೈಸುವ ರೈತರಿಗೆ ಪ್ರತಿ ಲೀಟರ್ ಎಮ್ಮೆ ಹಾಲಿಗೆ ₹ 33.75 ಹಾಗೂ ಆಕಳು ಹಾಲಿಗೆ ₹ 20.50 ನೀಡಲಾಗುವುದು’ ಎಂದು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ (ಬೆಮುಲ್) ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ತಿಳಿಸಿದರು.

ಆಡಳಿತ ಮಂಡಳಿ ಸಭೆಯ ನಂತರ ಮಾತನಾಡಿದ ಅವರು, ‘ಈ ಮೊದಲು ಎಮ್ಮೆ ಹಾಲಿಗೆ ₹ 33 (ಲೀಟರ್‌ಗೆ) ಹಾಗೂ ಆಕಳು ಹಾಲಿಗೆ ₹ 19.75 ನೀಡಲಾಗುತ್ತಿತ್ತು. ಜಿಲ್ಲೆಯಲ್ಲಿ ಮಳೆ ಅಭಾವದಿಂದ ಬರಗಾಲ ಉಂಟಾಗಿರುವುದರಿಂದ ಹೈನುಗಾರರಿಗೆ ಅನುಕೂಲವಾಗಲೆಂದು ದರ ಹೆಚ್ಚಿಸಿದ್ದೇವೆ. ಹಾಲು ಉತ್ಪಾದಕರಿಗೆ, ಹೆಚ್ಚುತ್ತಿರುವ ಉತ್ಪಾದನೆ ವೆಚ್ಚವನ್ನು ಸರಿದೂಗಿಸಲು ಹಾಗೂ ಹೈನುಗಾರಿಕೆಯನ್ನು ಉತ್ತೇಜಿಸಲು ಈ ನಿರ್ಧಾರ ಮಾಡಿದ್ದೇವೆ. ಇದನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಹೆಚ್ಚಿನ ಪ್ರಮಾಣದ ಗುಣಮಟ್ಟದ ಹಾಲು ಶೇಖರಿಸಿ ಸಂಘಗಳ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ಕೋರಿದರು.

‘ಸರ್ಕಾರದ ಪ್ರೋತ್ಸಾಹಧನ ಪ್ರತಿ ಲೀಟರ್‌ಗೆ ₹ 6 ಇದೆ. ಪ್ರೋತ್ಸಾಹಧನ ಸೇರಿ ರೈತರಿಗೆ ಪ್ರತಿ ಲೀಟರ್ ಎಮ್ಮೆ ಹಾಲಿಗೆ ₹ 39.75 ಹಾಗೂ ಆಕಳು ಹಾಲಿಗೆ ₹ 26.50 ನೀಡಲು ಒಕ್ಕೂಟ ತೀರ್ಮಾನಿಸಿದೆ. ಸದಸ್ಯ ರೈತರಿಗೆ ಒಕ್ಕೂಟದಿಂದ ಅವರವರ ಖಾತೆಗಳಿಗೆ ಸರ್ಕಾರದ ಪ್ರೋತ್ಸಾಹಧನ ಜಮಾ ಆಗಲಿದೆ’ ಎಂದರು.

ಇದೇ ವೇಳೆ, ಕರ್ನಾಟಕ ಹಾಲು ಮಹಾಮಂಡಳಕ್ಕೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಅಮರನಾಥ ಜಾರಕಿಹೊಳಿ ಅವರನ್ನು ಅಭಿನಂದಿಸಿದರು.

ಆಡಳಿತ ಮಂಡಳಿ ನಿರ್ದೇಶಕರಾದ ಅಮರನಾಥ ಜಾರಕಿಹೊಳಿ, ಮಲ್ಲಪ್ಪ ಪಾಟೀಲ, ಎಸ್.ಎಸ್. ಮುಗಳಿ, ಬಿ.ಬಿ. ಕಟ್ಟಿ, ಉದಯಸಿಂಗ್ ಶಿಂಧೆ, ಕಲ್ಲಪ್ಪ ಗಿರೆನ್ನವರ, ರಾಯಪ್ಪ ಡೂಗ, ಬಸವರಾಜ ಪರನ್ನವರ, ವಿರೂಪಾಕ್ಷಿ ಈಟಿ, ಪ್ರಕಾಶ ಅಂಬೋಜಿ, ಸವಿತಾ ಖಾನಪ್ಪನವರ, ಅಪ್ಪಾಸಾಬ ಅವತಾಡೆ, ಬಾಬುರಾವ್ ವಾಘಮೂಡೆ, ವ್ಯವಸ್ಥಾಪಕ ನಿರ್ದೇಶಕ ಉಮೇದುಲ್ಲಾ ಖಾನ್ ಉಪಸ್ಥಿತರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !