ಸಚಿವರ ಪ್ರಯಾಣ ಭತ್ಯೆ: ತನಿಖೆಗೆ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಒತ್ತಾಯ

7

ಸಚಿವರ ಪ್ರಯಾಣ ಭತ್ಯೆ: ತನಿಖೆಗೆ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಒತ್ತಾಯ

Published:
Updated:

ಬೆಳಗಾವಿ: ಸರ್ಕಾರದಿಂದ ವಾಹನ ಹಾಗೂ ಇಬ್ಬರು ಚಾಲಕರನ್ನು ನೀಡಲಾಗಿದ್ದರೂ ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರು ₹ 24.28 ಕೋಟಿ ಪ್ರಯಾಣ ಭತ್ಯೆ ಪಡೆದಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಿದ್ದು, ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಒತ್ತಾಯಿಸಿದರು.

5 ವರ್ಷಗಳ ಅವಧಿಯಲ್ಲಿ ಸಚಿವರು ಪಡೆದುಕೊಂಡ ಪ್ರಯಾಣ ಭತ್ಯೆಯ ವಿವರವನ್ನು ಮಾಹಿತಿ ಹಕ್ಕಿನಡಿ ಪಡೆದುಕೊಂಡಿದ್ದು, ಸುದ್ದಿಗಾರರಿಗೆ ನೀಡಿದರು. ಸರ್ಕಾರದಿಂದ ವಾಹನ, ಚಾಲಕರ ಸೌಲಭ್ಯವಿದ್ದಾಗಲೂ ಏಕೆ ಇವರ ಪ್ರತ್ಯೇಕವಾಗಿ ಪ್ರಯಾಣ ಭತ್ಯೆ ಪಡೆದುಕೊಂಡರು ಎಂದು ಪ್ರಶ್ನಿಸಿದರು.

ಮಾರುಕಟ್ಟೆಯಲ್ಲಿ ಈಗ ಇನ್ನೋವಾ ಕಾರು ಪ್ರತಿ ಕಿ.ಮೀಗೆ ₹ 15 ದರದಂತೆ ಸಿಗುತ್ತದೆ. ಆದರೆ, ಸಚಿವರು ₹ 30ರ ದರದಂತೆ ಭತ್ಯೆ ಪಡೆದುಕೊಂಡಿದ್ದು ಸರಿಯೇ ಎಂದು ಪ್ರಶ್ನಿಸಿದರು. ಇನ್ನು ಮುಂದೆ ಸಚಿವರು ತಮಗೆ ಬೇಕಾದ ವಾಹನಗಳನ್ನು ಬಾಡಿಗೆ ಮೇಲೆ ಪಡೆದುಕೊಂಡರೆ ಚಾಲಕನ ವೇತನ ಹಾಗೂ ಹೊಸ ವಾಹನ ಖರೀದಿಸಲು ವ್ಯಯವಾಗುವ ಹಣ ಉಳಿಸಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.

ಖಾದರ್‌ ಹೆಚ್ಚು

ಆರೋಗ್ಯ ಸಚಿವರಾಗಿದ್ದ ಯು.ಟಿ. ಖಾದರ ₹ 1.56 ಕೋಟಿ ಪ್ರಯಾಣ ಭತ್ಯೆ ಪಡೆದಿದ್ದು, ಸಚಿವರಲ್ಲಿಯೇ ಗರಿಷ್ಠ ಪ್ರಮಾಣದ್ದಾಗಿದೆ. ನಂತರದ ಸ್ಥಾನ ಅರಣ್ಯ ಸಚಿವರಾಗಿದ್ದ ರಮಾನಾಥ ರೈ ಅವರದ್ದಾಗಿದೆ. ₹ 1.52 ಕೋಟಿ ಪಡೆದುಕೊಂಡಿದ್ದಾರೆ. ಕಾನೂನು ಸಚಿವ ಟಿ.ಬಿ. ಜಯಚಂದ್ರ ₹ 99.72 ಲಕ್ಷ ಪಡೆದುಕೊಂಡಿದ್ದು, ಮೂರನೇ ಸ್ಥಾನದಲ್ಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !