ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರಿಗಾಗಿ ಮೀಡಿದ ಮನ

Last Updated 6 ಜೂನ್ 2018, 9:56 IST
ಅಕ್ಷರ ಗಾತ್ರ

ಬಾದಾಮಿ: ‘ಪರಿಸರ ಸಂರಕ್ಷಣೆ ನಿತ್ಯ ನಡೆಯಬೇಕು’ ಎಂದು ಕಾಳಿಸಾದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ ವಿದ್ಯಾರ್ಥಿಗಳಿಗೆ ಹೇಳಿದರು.

ಇಲ್ಲಿನ ಕಾಳಿದಾಸ ಶಿಕ್ಷಣ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳು ಹಮ್ಮಿಕೊಂಡ ಪರಿಸರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಸಂಸ್ಥೆಯ ಆಡಳಿತಾಧಿಕಾರಿ ಶರಣಗೌಡ ಪಾಟೀಲ, ಶಾಲೆ ಮುಖ್ಯಸ್ಥರಾದ ಎಸ್‌.ಎಂ. ಮುಲ್ಲಾ, ಬಿ.ಎಂ. ಕಂಬಳಿ, ಎಸ್‌.ಎಚ್‌. ಕರೆನ್ನವರ, ಡಾ. ಎ.ಕೆ. ಪೂಜಾರ, ಆರ್‌.ಬಿ. ಮುಗಳಿ, ಸಿ.ಎಂ. ಹಿರೇಮಠ, ಮಂಜುನಾಥ ಥಿಟೆ ಇದ್ದರು.

ಗ್ರಾಮಾಭಿವೃದ್ಧಿ ಸಂಸ್ಥೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚೊಳಚಗುಡ್ಡ ಗ್ರಾಮದ ಹೊಸ ಬೆಳಕು ಸಾಂಸ್ಕೃತಿಕ ಹಾಗೂ ಅಭಿವೃದ್ಧಿ ಸೇವಾ ಸಂಸ್ಥೆ ಸದಸ್ಯರು ಗಿಡವನ್ನು ನೆಟ್ಟರು. ವಿಶ್ವನಾಥ ಜವಳಗದ್ದಿ, ಭೀಮಸಿ ಅಂಬಿಗೇರ, ಭೀಮಸಿ ಕಂಬಾರ, ಈರಣ್ಣ ಅಂಗಡಿ, ಕುಮಾರ ಹಾದಿಮನಿ, ಮಕ್ಬುಲ್‌ ಕಮತಗಿ, ಗಂಗಪ್ಪ ಅಂಬಿಗೇರ, ಸಂಗಮೇಶ ಪಡಿಯಪ್ಪನವರ, ವಿನಾಯಕ ಕಲಗುಡಿ, ಮಹಾಗುಂಡಪ್ಪ ಹುಂಬಿ ಇದ್ದರು.

‘ಆಧುನಿಕತೆಯಿಂದ ಪರಿಸರ ನಾಶ’

ರಬಕವಿ ಬನಹಟ್ಟಿ: ಇಂದಿನ ಆಧುನಿಕ ದಿನಗಳಲ್ಲಿ ನಾವು ನಮ್ಮ ನಗರಗಳನ್ನು ಕಾಂಕ್ರೀಟ್‌ ಪ್ರದೇಶಗಳನ್ನಾಗಿ ಮಾಡುತ್ತಿದ್ದೇವೆ. ಆಧುನಿಕತೆಯ ಹೆಸರಿನಲ್ಲಿ ಗಿಡ ಮರಗಳ ಕಡಿಯಲಾಗುತ್ತಿದೆ. ಒಂದು ಗಿಡವನ್ನು ಕಡಿದರೆ ಹತ್ತು ಗಿಡಗಳನ್ನು ಬೆಳೆಸುವ ಕಾರ್ಯದಲ್ಲಿ ನಾವು ತೊಡಬೇಕು ಎಂದು ಸ್ಥಳೀಯ ಸಿವಿಲ್‌ ನ್ಯಾಯಾಧೀಶೆ ರೇಶ್ಮಾ ಗೋಣಿ ತಿಳಿಸಿದರು.

ಅವರು ಮಂಗಳವಾರ ಸ್ಥಳೀಯ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪತ್ರಿಕೆಯ ಜೊತೆಗೆ ಮಾತನಾಡಿದರು. ಗಿಡಗಳನ್ನು ಬೆಳೆಸುವುದರ ಜೊತೆಗ ಅವುಗಳ ರಕ್ಷಣೆ ಕೂಡಾ ಮುಖ್ಯವಾದದು. ಗಿಡ ಮರಗಳನ್ನು ಕಡಿಯದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಪರಿಸರ ಕುರಿತು ಮಕ್ಕಳಲ್ಲಿ ಹೆಚ್ಚಿನ ಜಾಗೃತಿಯನ್ನುಂಟು ಮಾಡುವುದರ ಸಲುವಾಗಿ ಪಠ್ಯ ಪುಸ್ತಕದಲ್ಲಿ ಇನ್ನೂ ಅಂಶಗಳನ್ನು ಅಳವಡಿಸಬೇಕು. ಹಚ್ಚ ಹಸಿರಿನ ಪರಿಸರ ನಮ್ಮೆಲ್ಲರಿಗೂ ಒಳ್ಳೆಯದು ಎಂದು ನ್ಯಾಯಾಧೀಶೆ ರೇಶ್ಮಾ ಗೋಣಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ವಕೀಲ ಎಂ.ಜಿ.ಕೆರೂರ ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗಿಡ ಮರಗಳನ್ನು ಕಡಿಯುವವರ ವಿರುದ್ಧ ಕಟ್ಟು ನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ’ ಎಂದರು. ಕಿರಿಯ ಶ್ರೇಣಿಯ ಸಿವಿಲ್‌ ನ್ಯಾಯಾಧೀಶೆ ಎಚ್‌.ಶ್ವೇತಾ ಇದ್ದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್‌.ಎಂ.ಫಕೀರಪೂರ, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಎಸ್‌.ಜಿ.ಸಂಗಲಾಕ, ವಿಜಯ ಹೂಗಾರ, ಈಶ್ವರಚಂದ್ರ ಭೂತಿ, ಸುರೇಶ ಗೊಳಸಂಗಿ, ಶಿವಕುಮಾರ ಷಣ್ಮುಖ, ಜಿ.ಡಿ.ಪಾಟೀಲ, ಕೆ.ಜಿ.ಸಾಲ್ಗುಡೆ, ಸುಜಾತಾ ನಿಡೋಣಿ, ನ್ಯಾಯಾಲಯದ ಶಿರಸ್ತೆದಾರರಾದ ಎ.ಟಿ.ದೊಡ್ಡಮನಿ, ಎಸ್‌.ಜಿ.ಶಿವಪೂಜಿ, ನಾವಿ, ಸಂತೋಷ ರಾಠೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT