ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಳಖೋಡ: ಶಾಸಕ ಮಹೇಂದ್ರ ತಮ್ಮಣ್ಣವರರಿಗೆ ಅಭಿಮಾನಿಗಳಿಂದ ಸನ್ಮಾನ

Published 4 ಜೂನ್ 2023, 12:36 IST
Last Updated 4 ಜೂನ್ 2023, 12:36 IST
ಅಕ್ಷರ ಗಾತ್ರ

ಮುಗಳಖೋಡ: ಕುಡಚಿ ಶಾಸಕರಾಗಿ ಮೊದಲ ಬಾರಿಗೆ ಮುಗಳಖೋಡ ಪಟ್ಟಣಕ್ಕೆ ಆಗಮಿಸಿದ ಮಹೇಂದ್ರ ತಮ್ಮಣ್ಣವರ ಅವರನ್ನು ಸ್ವಾಗತಿಸಿ, ಸನ್ಮಾನಿಸಲಾಯಿತು.

ಶಾಸಕರು ಮುಗಳಖೋಡ ಕ್ರಾಸ್‌ಗೆ ಆಗಮಿಸುತ್ತಿದ್ದಂತೆ, ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಬರಮಾಡಿಕೊಂಡರು. ಯಲ್ಲಾಲಿಂಗ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅಲ್ಲಿಂದ ಭೀರಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಭೀರಲಿಂಗೇಶ್ವರ ದೇವರ ದರ್ಶನ ಪಡೆದರು. ಕರೇಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ  ನೀಡಿದರು. ಈ ವೇಳೆ ವಿವಿಧ ಸಮೂದಾಯಗಳ ಮುಖಂಡರು ಶಾಸಕ ಮಹೇಂದ್ರ ತಮ್ಮಣ್ಣವರ ಅವರನ್ನು ಶಾಲುಮಾಲೆ ಹಾಕಿ ಸತ್ಕರಿಸಿ ಅಭಿನಂದನೆ ಸಲ್ಲಿಸಿದರು.

ಅಶೋಕ ಕೊಪ್ಪದ, ರಮೇಶ ಯಡವಣ್ಣವರ, ಪರಪ್ಪ ಖೇತಗೌಡರ, ಶಂಭು ಬಿರಾದರ, ಶ್ರೀಶೈಲ ಅಂಗಡಿ, ವರ್ಧಮಾನ ಶಿರಟ್ಟಿ, ಪರಮಾನಂದ ಬೆಳಗಲಿ, ಹಣಸಾಬ ನಾಯಿಕ, ಮುಪ್ಪಯ್ಯ ಹಿರೇಮಠ, ವಿಠ್ಠಲ ರಗಟಿ, ಮಹಾಂತೇಶ ಕುರಾಡೆ, ಚಿದಾನಂದ ಐಹೊಳೆ, ಚೇತನ ನಡುವಿನಕೇರಿ, ಮಂಜು ಮಾಂಗ, ಆನಂದ ತುಳಜವ್ವಗೋಳ, ಅಣ್ಣಪ್ಪ ಸೊಂಟನ್ನವರ, ವಿಠಲ ಕಂಬಳಿ , ರಮೇಶ ಮಾದರ,  ಶಿವಪ್ಪ ಜಿಡ್ಡಿಮನಿ, ವಿಠಲ ಸಾಮನೆ,  ಸಿದ್ದರಾಯ ಕಂಬಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT