ಶನಿವಾರ, ಡಿಸೆಂಬರ್ 4, 2021
24 °C

ಕಿಡಿಗೇಡಿಗಳ ಮಾತಿಗೆ ಕಿವಿಗೊಡಬೇಡಿ: ಲಕ್ಷ್ಮಿ ಹೆಬ್ಬಾಳಕರ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ತಾಲ್ಲೂಕಿನ ಗ್ರಾಮೀಣ ಕ್ಷೇತ್ರದ ರಣಕುಂಡೆ ಗ್ರಾಮದಲ್ಲಿ ಹಿಂದೂ–ಮುಸ್ಲಿಮರ ನಡುವೆ ಕಿಡಿಗೇಡಿಗಳು ದ್ವೇಷ ಹುಟ್ಟಿಸಿ ನೆಮ್ಮದಿಗೆ ಭಂಗ ತಂದಿದ್ದ ಪ್ರಕರಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಸಂಧಾನದಿಂದಾಗಿ ಬಗೆಹರಿದಿದೆ.

ಪೊಲೀಸ್ ಹಾಗೂ ಇತರ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ತೆರಳಿದ ಶಾಸಕರು, ಎರಡೂ ಸಮಾಜದವರೊಂದಿಗೆ ಚರ್ಚಿಸಿ ಸಮಸ್ಯೆ ಇತ್ಯರ್ಥಪಡಿಸಿದ್ದಾರೆ.

‘ಮುಂದೆ ಇಂತಹ ಅಹಿತಕರ ಘಟನೆಗಳು ನಡೆಯಬಾರದು. ಜನರು ಕಿಡಿಗೇಡಿಗಳ ಮಾತಿಗೆ ಕಿವಿಗೊಡಬಾರದು’ ಎಂದು ಕೋರಿದರು. ಇದಕ್ಕೆ ಎಲ್ಲರೂ ಒಪ್ಪಿದ್ದಾರೆ. ಅಲ್ಲಿ ನಿರ್ಮಿಸುತ್ತಿರುವ ಹುಡೆ ದೇವಸ್ಥಾನಕ್ಕೆ ₹50 ಸಾವಿರ(ಮಹಾಪ್ರಸಾದ ಸೇವೆಗೆ 30 ಸಾವಿರ ಮತ್ತು ಜೀರ್ಣೋದ್ಧಾರಕ್ಕೆ ₹ 20 ಸಾವಿರ)ವನ್ನು ದೇವಸ್ಥಾನ ಸಮಿತಿತವರಿಗೆ ಹಸ್ತಾಂತರಿಸಿದ್ದಾರೆ.

ನಿಂಗಪ್ಪ ಪಾಟೀಲ, ಸಂಜು ಪಾವಸೆ, ಮಲ್ಲಪ್ಪ ಬಿ ಪಾಟೀಲ, ಭರಮಾ ಪಾಟೀಲ, ಕಲ್ಲಪ್ಪ, ರಮೇಶ ಪಾಟೀಲ, ಗುಂಡು ಪಾಟೀಲ, ವೈಜನಾಥ ಗೋಜೆಕರ, ಧಾನು ಪಾಟೀಲ, ರಮೇಶ ಪಾಟೀಲ, ಗುಂಡು ಪಾಟೀಲ, ಬಿ.ವೈ. ಪಾಟೀಲ, ನೂರ್ ತಹಶೀಲ್ದಾರ, ನಿಯಾಜ ಬುಕಾರಿ, ಬಾಬುಸಾಬ ಸನದಿ, ಶಕೀಲ ಜಮಾದಾರ, ಮಲೀಕ ಜಮಾದಾರ, ಹಸನ ಮುಲ್ಲಾ, ದಸ್ತಗೀರ ತಹಶೀಲ್ದಾರ, ನಿಯಾಜ ಮುಲ್ಲಾ, ಪಿಡಿಒ ಪ್ರಕಾಶ ಕುಡಚಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು