ಕಾಗವಾಡ: ತಾಲ್ಲೂಕಿನ ಉಗಾರ ಖುರ್ದ ಪುರಸಭೆ ಮತ್ತು ಕಾಗವಾಡ, ಶೇಡಬಾಳ, ಐನಾಪೂರ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರ ಮುಷ್ಕರ 4 ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ಉಗಾರ ಖುರ್ದ ಪುರಸಭೆ ಕಾರ್ಮಿಕರನ್ನು ಶಾಸಕ ರಾಜು ಕಾಗೆ ಭೇಟಿಯಾಗಿ ಮುಷ್ಕರಕ್ಕೆ ಬೆಂಬಲ ಸೂಚಿಸಿದರು.

‘ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಿಸಿದ ಸಚಿವರಿಗೆ ನಿಮ್ಮ ಧ್ವನಿಯನ್ನು ಮುಟ್ಟಿಸಿ ನಿಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ’ ಶಾಸಕ ರಾಜು ಕಾಗೆ ಹೇಳಿದರು.

ಉಗಾರ ಖುರ್ದ ಪೌರ ಕಾರ್ಮಿಕರು ತಹಶೀಲ್ದಾರ್ ರಾಜೇಶ ಬುರ್ಲಿ ಅವರಿಗೆ ಮನವಿ ಸಲ್ಲಿಸಿದರು.

ಉಗಾರ ಪುರಸಭೆ ಅಧ್ಯಕ್ಷೆ ಫಾತಿಮಾ ನದಾಫ, ಉಪಾಧ್ಯಕ್ಷ ಸತೀಶ ಜಗತಾಪ,ಮುಖ್ಯಾಧಿಕಾರಿ ಎಂ.ಆರ್. ನದಾಫ ಸೇರಿದಂತೆ ಪುರಸಭೆಯ ಸದಸ್ಯರು, ಮುಷ್ಕರ ನಿರತ ಪೌರಕಾರ್ಮಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.