ಗುರುವಾರ , ಜೂನ್ 30, 2022
21 °C

ಕಾರ್ಮಿಕನ ಚಿಕಿತ್ಸೆಗೆ ನೆರವಾದ ಸತೀಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಚಲಿಸುತ್ತಿದ್ದ ರೈಲಿನಡಿ ಆಕಸ್ಮಿಕವಾಗಿ ಸಿಲುಕಿ ಕಾಲುಗಳನ್ನು ಕಳೆದುಕೊಂಡಿದ್ದ ವ್ಯಕ್ತಿಯ ಚಿಕಿತ್ಸೆಗೆ ನೆರವಾಗುವ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಮಾನವೀಯತೆ ಮೆರೆದಿದ್ದಾರೆ.

ತಮ್ಮ ಕ್ಷೇತ್ರದ ಪಾಶ್ಚಾಪುರದ ಅಕಾನಿಬಾಷಾ ದರ್ಗಾದ ಜೀರ್ಣೋದ್ಧಾರ ಕೆಲಸಕ್ಕಾಗಿ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಅಮರಾವತಿಯಿಂದ ಬಂದಿದ್ದ ಕಾರ್ಮಿಕ ವಿಜಯ ಆಸೂರಕರ್, ತನ್ನೂರಿಗೆ ವಾಪಸಾಗುವಾಗ ದುರ್ಘಟನೆ ನಡೆದಿತ್ತು. ಆಕಸ್ಮಿಕವಾಗಿ ಬಿದ್ದಿದ್ದ ಅವರು ಗಂಭೀರವಾಗಿ ಗಾಯಗೊಂಡು, ಸಾವು–ಬದುಕಿನ ಮಧ್ಯೆ ಹೋರಾಡುತ್ತಿದ್ದರು. ವಿಷಯ ತಿಳಿದ ಶಾಸಕರು, ತಮ್ಮ ಕಾರ್ಯಕರ್ತರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ಸೇರಿಸಿದ್ದರು.

ಚಿಕಿತ್ಸೆಯ ಸಂಪೂರ್ಣ ಖರ್ಚನ್ನು ಶಾಸಕರೇ ನೋಡಿಕೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆ ಹಾಗೂ ಜೀವನ ನಿರ್ವಹಣೆಗಾಗಿ ₹ 1 ಲಕ್ಷ ಧನಸಹಾಯವನ್ನೂ ಮಾಡಿದ್ದಾರೆ. ಶಾಸಕರ ಮಾರ್ಗದರ್ಶನದಲ್ಲಿ ಪಾಶ್ಚಾಪೂರದ ಸಮಾಜ ಸೇವಕರಾದ ಖಲೀಲ ಪೀರಜಾದೆ, ಸೈಯದ್ ಮಕಾನದಾರ, ಅಶ್ಪಾಕ್ ದರ್ಗಾ, ಫಜಲ್ ಮಕಾನದಾರ, ಬಾಬಾಸಾಬ ದರ್ಗಾ, ರಫೀಕ ಪೀರಜಾದೆ, ಜಾಕೀರ ದರ್ಗಾ ಕಾರ್ಮಿಕ ಚೇತರಿಸಿಕೊಳ್ಳಲು ನೆರವಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು