ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಪರಿಷತ್ ಚುನಾವಣೆ: ಲಕ್ಷ್ಮಿ ಹೆಬ್ಬಾಳಕರ ಸಹೋದರ ಚನ್ನರಾಜ ಕೋಟಿ ಒಡೆಯ

Last Updated 23 ನವೆಂಬರ್ 2021, 15:58 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸಹೋದರ, ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಕೋಟಿ ಒಡೆಯ. ಅವರು ₹ 20.66 ಕೋಟಿ ಚರಾಸ್ತಿ ಹಾಗೂ ₹ 10.84 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ₹ 5.76 ಕೋಟಿ ಸಾಲವೂ ಇದೆ.

ಸರ್ಕಾರಕ್ಕೆ ₹ 4.18 ಕೋಟಿ ಬಾಕಿ ಇದ್ದು, ಸಂಬಂಧಿಸಿದಂತೆ ವ್ಯಾಜ್ಯ ಪ್ರಗತಿಯಲ್ಲಿದೆ ಎಂದು ನಮೂದಿಸಿದ್ದಾರೆ.

ವಿಧಾನಪರಿಷತ್ ಚುನಾವಣೆಗೆ ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಮ್ಮ ಆಸ್ತಿ ವಿವರವನ್ನು ಅವರು ಘೋಷಿಸಿದ್ದಾರೆ. 37 ವರ್ಷದ, ಮರೈನ್ ಎಂಜಿನಿಯರಿಂಗ್ ಪದವೀಧರರಾದ ಅವರು ಬೆಳಗಾವಿ ತಾಲ್ಲೂಕಿನ ಮೋದಗಾದಲ್ಲಿರುವ ಫಾರ್ಮ್‌ಹೌಸ್ ನಿವಾಸಿ ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಖಾತೆಗಳನ್ನು ಹೊಂದಿದ್ದಾರೆ. ತಮ್ಮ ಬಳಿಯಲ್ಲಿ ₹ 4.45 ಲಕ್ಷ ಮತ್ತು ಪತ್ನಿ ನಂದಿನಿ ಬಳಿ ₹ 36,200 ಇದೆ ಎಂದು ಮಾಹಿತಿ ನೀಡಿದ್ದಾರೆ.

ಹರ್ಷ ಶುಗರ್ಸ್‌ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಅವರು ಆ ಕಾರ್ಖಾನೆ ಸೇರಿದಂತೆ ವಿವಿಧೆಡೆ ಷೇರು ಹೊಂದಿದ್ದಾರೆ. ₹ 26 ಲಕ್ಷ ಹಾಗೂ ₹ 18.94 ಲಕ್ಷ ಮೌಲ್ಯದ ಕಾರ್‌ಗಳಿವೆ. ಪಿತ್ರಾರ್ಜಿತವಾಗಿ ಬಂದ ₹ 7.33 ಲಕ್ಷ ಮೌಲ್ಯದ 1 ಕೆ.ಜಿ. ಚಿನ್ನ ಮತ್ತು ₹ 1.23 ಲಕ್ಷ ಮೌಲ್ಯದ 10 ಕೆ.ಜಿ. ಬೆಳ್ಳಿ ಆಭರಣವಿದೆ. ತಾವು ಖರೀದಿಸಿದ ₹ 26 ಲಕ್ಷ ಮೌಲ್ಯದ 940.31 ಗ್ರಾಂ. ಆಭರಣ ಇದೆ. ಪತ್ನಿ ಹೆಸರಲ್ಲಿ ₹ 18.12 ಲಕ್ಷ ಮೌಲ್ಯದ ಬಂಗಾರದ ಆಭರಣ ಮತ್ತು ₹ 1.45 ಲಕ್ಷ ಮೌಲ್ಯದ ಬೆಳ್ಳಿಯ ಆಭರಣಗಳಿವೆ ಎಂದು ತಿಳಿಸಿದ್ದಾರೆ.

ಪತ್ನಿ ನಂದಿನಿ ₹ 32.46 ಲಕ್ಷ, ಪುತ್ರ ಧೀರಜ್‌ ಹೆಸರಿನಲ್ಲಿ ₹ 2.29 ಲಕ್ಷ ಮೌಲ್ಯದ ಚರಾಸ್ತಿ ಮತ್ತು ₹ 10 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT