ಮಂಗಳವಾರ, ಆಗಸ್ಟ್ 20, 2019
21 °C

ರೈಲ್ವೆ ನಿಲ್ದಾಣದ ಪ್ರವೇಶ ದ್ವಾರದ ಬಳಿ 100 ಅಡಿ ಎತ್ತರದ ರಾಷ್ಟ್ರ ಧ್ವಜ ಸ್ತಂಭ

Published:
Updated:

ಬೆಳಗಾವಿ: ಇಲ್ಲಿನ ರೈಲ್ವೆ ನಿಲ್ದಾಣದ ಪ್ರವೇಶ ದ್ವಾರದ ಬಳಿ 100 ಅಡಿ ಎತ್ತರದ ಸ್ಮಾರಕ ರಾಷ್ಟ್ರಧ್ವಜ ಸ್ತಂಭ ನಿರ್ಮಿಸಲಾಗಿದೆ. 

ಈಗಾಗಲೇ ಬೆಂಗಳೂರು ಹಾಗೂ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಇಂತಹ ಧ್ವಜಸ್ತಂಭಗಳನ್ನು ನೆಡಲಾಗಿದೆ. ದಿನದ ಎಲ್ಲ 24 ಗಂಟೆಯೂ  ರಾಷ್ಟ್ರಧ್ವಜ ಹಾರಾಡುತ್ತಿದೆ. ಸದ್ಯದಲ್ಲಿಯೇ ಹುಬ್ಬಳ್ಳಿ ಹಾಗೂ ಮೈಸೂರು ಆವರಣದಲ್ಲಿಯೂ ಸ್ಥಾಪಿಸಲಾಗುವುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಧ್ವಜಸ್ತಂಭವು 100 ಅಡಿ ಎತ್ತರದಲ್ಲಿದೆ. ಧ್ವಜವು 20x30 ಅಡಿ ಅಳತೆ ಹೊಂದಿದೆ. ಇದನ್ನು ನಿರ್ಮಿಸಲು ₹ 15 ಲಕ್ಷ ವೆಚ್ಚವಾಗಿದೆ.

Post Comments (+)