ಮೂಡಲಗಿ: ‘ಮೂಡಲಗಿಯ ಮಂಜುನಾಥ ಸೈನಿಕ ತರಬೇತಿ ಕೇಂದ್ರವು ಗ್ರಾಮೀಣ ಭಾಗದ ಯುವಕರನ್ನು ಸೈನಿಕರಾಗುವ ಕನಸನ್ನು ನನಸಾಗಿ ಮಾಡುತ್ತಿದೆ’ ಎಂದು ನಿವೃತ್ತ ಯೋಧ ಮಲ್ಲಿಕಾರ್ಜುನ ದಳವಾಯಿ ಹೇಳಿದರು.

ಇಲ್ಲಿಯ ಮಂಜುನಾಥ ಸೈನಿಕ ತರಬೇತಿ ಕೇಂದ್ರದಿಂದ ಆಯ್ಕೆಯಾಗಿರುವ 50 ಅಗ್ನಿವೀರರರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶ ಸೇವೆ ಮಾಡುವ ಅಪೂರ್ವ ಅವಕಾಶ ಪಡೆದ ಯುವಕರ ಆಯ್ಕೆಯು ಶ್ಲಾಘನೀಯ ಎಂದರು.

ಮೂಡಲಗಿ ಮಂಜುನಾಥ ಸೈನಿಕ ತರಬೇತಿ ಕೇಂದ್ರವು ಕಳೆದ 22 ವರ್ಷಗಳಿಂದ ಸಾವಿರಾರು ಯುವಕರನ್ನು ಭಾರತೀಯ ಸೇನೆಗೆ ಕಳಿಸಿರುವ ಹೆಗ್ಗಳಿಕೆ ಹೊಂದಿದೆ. ಈಗ ಏಕಕಾಲಕ್ಕೆ 50 ಅಗ್ನಿವೀರರನ್ನು ದೇಶ ಸೇವೆಗೆ ಅನಿಗೊಳಿಸಿದ್ದು ಹೆಮ್ಮೆ ತರುವಂತದ್ದು ಎಂದರು.

ಸುಭಾಷ ಗೊಡ್ಯಾಗೋಳ, ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ ಮಾತನಾಡಿದರು. 50 ಅಗ್ನಿವೀರರರಿಗೆ ಹಾಗೂ ಮಾಜಿ ಸೈನಿಕರಿಗೆ ಸಂಸ್ಥೆಯಿಂದ ಸನ್ಮಾನಿಸಲಾಯಿತು. ಭೀಮಪ್ಪ ಗಡಾದ, ನಿವೃತ್ತ ಸೈನಿಕ ಬಸಪ್ಪ ಹೆಗಡೆ, ಗೀತಾ ಕೊಡಗನೂರ, ರುಕ್ಮಿಣಿ ಶಿವಾಪುರ, ಮಹಾಂತೇಶ ಕೊಟಬಾಗಿ, ರವಿ ಕರಿಗಾರ, ಸಚಿನ ಕಾಂಬಳೆ, ಯಾಕೂಬ್ ಹಾದಿಮನಿ, ಮಹಾದೇವ ಸಿದ್ನಾಳ, ಅಭಿಷೇಕ ಕಟ್ಟಿಮನಿ, ಹಣಮಂತ ಅಂಗಡಿ, ಅಯೂಬ ಕಲಾರಕೊಪ್ಪ, ಮಲ್ಲು ಬುಜಣ್ಣವರ ಇದ್ದರು. ಅಶೋಕ ಬಸಳಿಗುಂದಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.