ಮೂಡಲಗಿ: ‘ಬಾಬು ಜಗಜೀವನರಾಂ ಅವರು ತುಳಿತಕ್ಕೊಳಗಾದವರ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ನಾಯಕ. ಎಲ್ಲರ ಮನದಲ್ಲಿ ಉಳಿದುಕೊಂಡಿದ್ದಾರೆ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ಅರಭಾವಿ ಪಟ್ಟಣ ಪಂಚಾಯಿತಿಯಲ್ಲಿ ಭಾನುವಾರ ಆಚರಿಸಿದ ಬಾಬು ಜಗಜೀವನರಾಂ ಜಯಂತಿಯಲ್ಲಿ ಅವರು ಮಾತನಾಡಿ, ‘ಬಾಬೂಜಿ ಮೂರು ದಶಕಗಳ ಕಾಲ ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದರು.

ಭಾರತಕ್ಕೆ ಸಂವಿಧಾನದ ಕೊಡುಗೆ ಕೊಟ್ಟ ಡಾ. ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಶೋಷಿತರ ಧ್ವನಿಯಾಗಿದ್ದ ಬಾಬು ಜಗಜೀವನ ರಾಂ ಅವರು ಭಾರತವು ಕಂಡ ಅನನ್ಯ ರತ್ನಗಳು. ದೇಶದ ಪ್ರಗತಿಯಲ್ಲಿ ನಮ್ಮ ಪ್ರಗತಿ ಎಂದು ನಂಬಿದ್ದ ಅತ್ಯಂತ ಸರಳ ರಾಜಕಾರಣಿ ಎಂದು ಬಣ್ಣಿಸಿದರು.

ಬೆಳಗಾವಿ ಜಿಲ್ಲಾ (ಗ್ರಾ) ಬಿಜೆಪಿ ಅಧ್ಯಕ್ಷ ಸುಭಾಷ ಪಾಟೀಲ, ಬೆಮುಲ್ ನಿರ್ದೇಶಕ ಬಸವರಾಜ ಮಾಳೆದವರ, ಪ್ರಮುಖರಾದ ಶಂಕರ ಬಿಲಕುಂದಿ, ನಿಂಗಪ್ಪ ಇಳಿಗೇರ, ಮುತ್ತೆಪ್ಪ ಜಲ್ಲಿ, ಭೀಮಶಿ ಮಾಳೆದವರ, ರಮೇಶ ಮಾದರ, ರಮೇಶ ಸಂಪಗಾಂವಿ, ಅಡಿವೆಪ್ಪ ಬಿಲಕುಂದಿ, ಸುರೇಶ ದೊಡ್ಡಲಿಂಗನ್ನವರ, ಹಣಮಂತ ಕಂದಾರಿ, ಮೋಹನ ಬಂಡಿವಡ್ಡರ, ಇಕಬಾಲ ಸರ್ಕಾವಸ, ಸಿದ್ದು ಕಂಕಣವಾಡಿ, ಕೃಷ್ಣಾ ಬಂಡಿವಡ್ಡರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಿನಾಯಕ ಬಬಲೇಶ್ವರ, ಶಿವು ದೊಡಗೋಣಿ ಇದ್ದರು.

ಹುಕ್ಕೇರಿ: ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನರಾಂ ಅವರ ಜಯಂತಿಯನ್ನು ಪಟ್ಟಣದಲ್ಲಿ ಭಾನುವಾರ ಆಚರಿಸಲಾಯಿತು. ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸಮುದಾಯದವರು ಪಟ್ಟಣದಲ್ಲಿ ಬೆಳಿಗ್ಗೆ ಜಗಜೀವನರಾಂ ಅವರ ಭಾವಚಿತ್ರದ ಮೆರವಣಿಗೆ ನಡೆಸಿದರು.

ಜಗಜೀವನರಾಂ ಭವನದಲ್ಲಿ ಸಭೆ ನಡೆಯಿತು. ಯಮಕನಮರಡಿ ಸಿದ್ಧಬಸವ ದೇವರು ಸಾನ್ನಿಧ್ಯದಲ್ಲಿ ತಹಶೀಲ್ದಾರ್ ಬಲರಾಮ್ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಇಒ ಟಿ.ಆರ್. ಮಲ್ಲಾಡದ, ಪೊಲೀಸ್ ಇನ್ಸ್ಪೆಕ್ಟರ್ ಶಿವಶಂಕರ ಅವಜಿ, ಬಿಇಒ ಪ್ರಭಾವತಿ ಪಾಟೀಲ್, ಮುಖಂಡರಾದ ಉದಯ ಹುಕ್ಕೇರಿ, ರಮೇಶ್ ಹುಂಜಿ, ಕೆಂಪಣ್ಣ ಶಿರಹಟ್ಟಿ, ಬಾವುಸಾಹೇಬ ಪಾಂಡ್ರೆ, ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ ಭಜಂತ್ರಿ, ಡಾ.ಆರ್.ಎಚ್.ಹೊಸಮನಿ, ಸಿಡಿಪಿಒ ಹೊಳೆಪ್ಪ ಮುಖ್ಯ ಇದ್ದರು.

ಹಿಡಕಲ್ ಡ್ಯಾಂ ಶಾಲೆಯ ನಿವೃತ್ತ ಶಿಕ್ಷಕ ಭಾಸ್ಕರ್ ಮಾನೆ ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗುರುಶಾಂತ ಪಾವಟೆ, ಕ್ಷೇತ್ರ ಸಮನ್ವಯಾಧಿಕಾರಿ ಎ.ಎಸ್. ಪದ್ಮನ್ನವರ, ದಲಿತ ಮುಖಂಡರಾದ ಉದಯ ಹುಕ್ಕೇರಿ, ಬಾಹುಸಾಹೇಬ ಪಾಂಡ್ರೆ, ಕೆಂಪಣ್ಣ ಶಿರಹಟ್ಟಿ, ಸಿದ್ದಪ್ಪ ಹೊಸಮನಿ, ಶಂಕರ ಕಟ್ಟಿಮನಿ, ಪಿಂಟೂ ಸೂರ್ಯವಂಶಿ, ಗೋಪಾಲ ಕಾಂಬಳೆ, ಸರೋಜಾ ಕಾಂಬಳೆ, ಎಲ್.ಬಿ. ಮಾಲದಾರ, ಎಂ.ಬಿ.ಕಾಂಬಳೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-21-909745550

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.