ಮೂಡಲಗಿ: ಅಸ್ಸಾಂ ಚುನಾವಣೆ ಪ್ರಚಾರದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ರಾಜು ಪೂಜಾರಿ ಅವರಿಗೆ ಬಿಜೆಪಿ ಅರಭಾವಿ ಮಂಡಲದ ಯುವ ಮೋರ್ಚಾದವರು ಕಾರ್ಯಕರ್ತೆಯರು ಮನವಿ ನೀಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡುತ್ತಾ, ಕುರಾನದಲ್ಲಿ ಬರೆದಂತೆ ನಮಾಜ ಮಾಡುವ ಸಂದರ್ಭದಲ್ಲಿ ವಿಷ ಸರ್ಪ ಕಂಡರೆ ಅದನ್ನು ಕೊಲ್ಲಬೇಕು. ಬಿಜೆಪಿ ಮತ್ತು ಆರ್ಎಸ್ಎಸ್ ಅದೇ ರೀತಿಯ ವಿಷಸರ್ಪಗಳು, ನೀವು ಅದನ್ನು ಕೊಲ್ಲದಿದ್ದರೆ ಬದುಕುವುದಿಲ್ಲ’ ಎಂದು ಬಿಜೆಪಿ ಮತ್ತು ಆರ್ಎಸ್ಎಸ್ ಸದಸ್ಯರನ್ನು ಕೊಲ್ಲಬೇಕು ಎಂದು ಪ್ರಚೋದಿಸಿದ್ದಾರೆ. ಅವರು ಮಾಡಿರುವ ಬೇಜವಾಬ್ದಾರಿ ಪ್ರಚೋದನೆಯು ದೇಶದಲ್ಲಿರುವ ಲಕ್ಷಾಂತರ ಬಿಜೆಪಿ ಮತ್ತು ಆರ್ಎಸ್ಎಸ್ ಸದಸ್ಯರ ಜೀವಕ್ಕೆ ಅಪಾಯವೊಡ್ಡಿದೆ, ಶಾಂತಿ ಕದಡಿದೆ ಎಂದರು.

ಪೊಲೀಸ್ ಇಲಾಖೆ ಯಾವುದೇ ಔಪಚಾರಿಕ ದೂರುಗಳಿಗಾಗಿ ಕಾಯದೆ, ಇಂತಹ ಪ್ರಕರಣಗಳಲ್ಲಿ ತಾವಾಗಿಯೇ ಸ್ವಯಂ ಕ್ರಮ ಕೈಗೊಳ್ಳಬೇಕು. ಈ ಪ್ರಚೋದನೆಯ ಪರಿಣಾಮ ಪ್ರಸಕ್ತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಲಕ್ಷಾಂತರ ಬಿಜೆಪಿ ಕಾರ್ಯಕರ್ತರನ್ನು ಕೊಲ್ಲಲು ಹೇಳಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೂಡಲೇ ಬಂಧಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರ.ಕಾರ್ಯದರ್ಶಿ ಗುರು ಹಿರೇಮಠ, ಮಂಡಲ ಅಧ್ಯಕ್ಷ ಮಹಾದೇವ ಶೇಕ್ಕಿ, ಉಪಾಧ್ಯಕ್ಷ ಪಾಂಡು ಮಹೇಂದ್ರಕರ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲಾಧ್ಯಕ್ಷ ಕಲ್ಮೇಶ ಗೋಕಾಕ, ಮದನ ದಾನನ್ನವವರ, ಕೇದಾರಿ ಭಸ್ಮೆ, ಜಗದೀಶ ತೇಲಿ, ಚಂದ್ರಶೇಖರ್ ಪತ್ತಾರ, ಮಂಡಲ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಕೋಣಿ, ಅಜೀತ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.