ಮೂಡಲಗಿ: ಪುಟ್ಟಪರ್ತಿ ಭಗವಾನ ಸತ್ಯಸಾಯಿ ಬಾಬಾರವರ ಜನ್ಮ ಶತಮಾ ನೋತ್ಸವ ಅಂಗವಾಗಿ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆಗೆ ಸತ್ಯಸಾಯಿ ಸೇವಾ ಸಮಿತಿಯ ಭಕ್ತವೃಂದವು ಎಸ್ಎಸ್ಆರ್ ಕಾಲೇಜು ಬಳಿಯಲ್ಲಿ ಭಕ್ತಿಭಾವದಿಂದ ಸ್ವಾಗತಿಸಿದರು.

ಕುಂಭ, ಆರತಿ, ವೇದಘೋಷಗಳ ಪಠಣದೊಂದಿಗೆ ಬಾಬಾರವರ ರಥದ ಶೋಭಾಯತ್ರೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು. ಶಾಲಾ ಮಕ್ಕಳು, ವಿವಿಧ ಗ್ರಾಮಗಳಿಂದ ಬಂದಿದ್ದ ಸಾಯಿ ಭಕ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಕಿತ್ತೂರ ಚನ್ನಮ್ಮ ವೃತ್ತ, ಕರೆಮ್ಮದೇವಿ ವೃತ್ತ, ಸ್ವಾಂತಂತ್ರ್ಯ ಸೇನಾನಿ ಸಂಗಪ್ಪಣ್ಣ ವೃತ್ತ ಹಾಗೂ ಕಲ್ಮೇಶ್ವರ ವೃತ್ತದ ಮೂಲಕ ಹಾಯ್ದು ಸತ್ಯಸಾಯಿ ಮಂದಿರದ ಬಳಿಯಲ್ಲಿ ಪೂಜೆಯನ್ನು ಸಲ್ಲಿಸಿ ಬರಮಾಡಿಕೊಂಡರು. ನೂರಾರು ಸಂಖ್ಯೆಯ ಭಕ್ತರು ಸಾಯಿಬಾಬಾರ ಪಾದುಕೆಗಳ ದರ್ಶನ ಪಡೆದುಕೊಂಡರು.

ಸಾಯಿ ಮಂದಿರದ ಸನ್ನಿಧಿ ಪ್ರಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸತ್ಯಸಾಯಿ ಸೇವಾ ಸಂಸ್ಥೆ ಕರ್ನಾಟಕ ಉತ್ತರದ ರಾಜ್ಯ ಘಟಕದ ಅಧ್ಯಕ್ಷ ಪದ್ಮ ನಾಭ ಪೈ ಮಾತನಾಡಿ, ಬಾಬಾ ಅವರ ಜನ್ಮ ಶತಮಾನೋತ್ಸವ ನಿಮಿತ್ತವಾಗಿ ಪುಟ್ಟಪರ್ತಿಯಿಂದ ದೇಶದ ವಿವಿಧ ಭಾಗದಲ್ಲಿ 5 ಪ್ರೇಮ ಪ್ರವಾಹಿನಿ ರಥಗಳು ಹೊರಟಿದ್ದು, ಈಗಾಗಲೇ 3 ಲಕ್ಷಕ್ಕೂ ಅಧಿಕ ಮೈಲುದಷ್ಟು ಸಂಚರಿಸಿವೆ. ಜನರಲ್ಲಿ ಆಧ್ಯಾತ್ಮಿಕ ಚಿಂತನೆ, ಧ್ಯಾನ ಬೆಳೆಸುವುದು ಮತ್ತು ಬಾಬಾರ ಸತ್ಯ, ಧರ್ಮ, ಶಾಂತಿ, ಪ್ರೇಮ, ಅಹಿಂಸೆ ಸಂದೇಶ ಬಿತ್ತರಿಸುವುದಾಗಿದೆ ಎಂದರು.

ರಾಜ್ಯ ಸೇವಾ ಸಂಯೋಜಕಿ ಪ್ರಿಯಾ.ಪಿ. ಪೈ ಹಾಗೂ ಸತ್ಯಸಾಯಿ ಸೇವಾ ಸಂಸ್ಥೆಗಳ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ವತಂಸ ಬಾಳಿಗಾ ಮಾತನಾಡಿದರು.

ಇದಕ್ಕೂ ಪೂರ್ವದಲ್ಲಿ ಎಸ್.ಆರ್.ಸೋನವಾಲಕರ, ಶಂಕರ ಚಿಪ್ಪಲಕಟ್ಟಿ, ಸಂತೋಷ ಸೋನವಾಲಕರ, ಬಿ.ಬಿ. ಹಂದಿಗುಂದ, ಶಿವಬಸು ಹಂದಿಗುಂದ, ಟಿ.ಡಿ.ಗಾಣಿಗೇರ ರಥವನ್ನು ಸ್ವಾಗತಿಸಿದರು.

ಕಲ್ಲೋಳಿಯ ರೋಹಿತ ಕಲಾಲ, ವಿಕ್ರಮ ಮುರಳಿ, ಸಂಜಯ ಪಾಟೀಲ, ಸುರೇಖಾ ಕೊರಡೆಕರ, ವೃಂದಾ ಬಾಳಿಗಾ, ಮಹಾದೇವಿ ಹುಕ್ಕೇರಿ, ಜೀವನ ಬಾಗಲಕೋಟಿ, ಸಂಚಾಲಕ ಹನಮಂತ ಸೊರಗಾವಿ, ಆರ್ಚಕ ಮಹೇಶ ಹಿರೇಮಠ ಇದ್ದರು.

ಮಕ್ಕಳ ವಿವಿಧ ಭಕ್ತಿಯ ನೃತ್ಯ ರೂಪಕಗಳು ಎಲ್ಲರ ಗಮನಸೆಳೆದವು. ಅನ್ನಸಂತರ್ಪಣೆ ಜರುಗಿತು. ಚನ್ನಪ್ಪ ಎಂ. ಹಂಜಿ ಸ್ವಾಗತಿಸಿದರು, ಪುಣ್ಯಲಕ್ಷ್ಮೀ ಮುರಗೇಶ ಗಾಡವಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-21-619835955

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.