ಮೂಡಲಗಿ: ಇಲ್ಲಿನ ಶಿವಬೋಧರಂಗ ಮಠದ ಆದಿ ಪುರುಷ ಶಿವಬೋಧರಂಗರ ಪುಣ್ಯತಿಥಿ, ಜಾತ್ರೆ ಏಪ್ರಿಲ್ 26ರಿಂದ 29ರ ವರೆಗೆ ಮಠಾಧೀಶರಾದ ದತ್ತಾತ್ರೇಯಯ ಬೋಧ ಸ್ವಾಮೀಜಿ ಮತ್ತು ಶ್ರೀಧರಬೋಧ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಲಿದೆ.

ಶಿವಬೋಧರಂಗರ ಪಲ್ಲಕ್ಕಿ ಉತ್ಸವವು ಏಪ್ರಿಲ್ 26ರಂದು ಮಧ್ಯಾಹ್ನ 12ರಿಂದ ಮೇಲಿನಮಠದಿಂದ ಜರುಗಲಿದೆ. ಮಧ್ಯಾಹ್ನ 3ಕ್ಕೆ ಕೆಳಗಿನಮಠದಲ್ಲಿ ಗುರುಮಂಡಲ ಪೂಜೆ, ವೈದಿಕರ ಪಾದ ಪೂಜೆ, ಸಂಜೆ 4ರಿಂದ ಮಹಾಪ್ರಸಾದ ಇರುವುದು. ರಾತ್ರಿ 10ಕ್ಕೆ ಕೆಳಗಿನಮಠದಲ್ಲಿ ಪಲ್ಲಕ್ಕಿ ಸೇವೆ ನಡೆಯಲಿದೆ.

ಏಪ್ರಿಲ್ 27ರಂದು ಬೆಳಿಗ್ಗೆ 11ರಿಂದ ಮಹಾಪ್ರಸಾದ ಇರುತ್ತದೆ. ಸಂಜೆ 4 ರಿಂದ ರಾತ್ರಿ 10ರವರೆಗೆ ಮೇಲಿನಮಠದಲ್ಲಿ ಶಾಸ್ತ್ರೀಯ ಸಂಗೀತ ಗೋಷ್ಠಿ, ರಾತ್ರಿ 10ಕ್ಕೆ ಕೆಳಗಿನಮಠದಲ್ಲಿ ಪಲ್ಲಕ್ಕಿ ಸೇವೆ ಜರುಗಲಿದೆ.

ಏಪ್ರಿಲ್ 28ರಂದು ಬೆಳಿಗ್ಗೆ 11ರಿಂದ ಮಹಾಪ್ರಸಾದ. ಮಧ್ಯಾಹ್ನ 4ರಿಂದ ಸಂಗೀತ ಗೋಷ್ಠಿ ಹಾಗೂ ಭಕ್ತರಿಂದ ಸಕ್ಕರೆ ಹಂಚುವ ಕಾರ್ಯಕ್ರಮ. ಏ.29ರಂದು ನಸುಕಿನ 5.30ಕ್ಕೆ ಶ್ರೀಗಳ ಪಲ್ಲಕ್ಕಿಯು ಮರಳಿ ಮೇಲಿನಮಠಕ್ಕೆ ಪ್ರವೇಶವಾಗಿ, ಕೀರ್ತನೆ, ಸಿಹಿ ಹಂಚುವುದರೊಂದಿಗೆ ಉತ್ಸವ ಸಂಪನ್ನವಾಗುವುದು.

ಮಠದ ಹಿನ್ನೆಲೆ: 15ನೇ ಶತಮಾನದಲ್ಲಿ ಮಹಾರಾಷ್ಟ್ರದ ಠಾಕಳಿ ಗ್ರಾಮದಲ್ಲಿ ಆಶ್ರಯಿಸಿದ ಮಹಾತಪಸ್ವಿ ಸಹಜಬೋಧ ಸ್ವಾಮೀಜಿಯವರ ಆಜ್ಞೆಯಂತೆ ಅವರ ಶಿಷ್ಯ ಶ್ರೀರಂಗಬೋಧ ಸ್ವಾಮೀಜಿ ದಕ್ಷಿಣ ನಿಶ್ವಿತ ದಿಕ್ಕಿನಲ್ಲಿ ಪ್ರಯಾಣ ಮಾಡಿ ನೆಲೆಸಿದ ಸ್ಥಳವೇ ಈಗಿನ ಮೂಡಲಗಿ ಆಗಿದೆ. ಶ್ರೀರಂಗಬೋಧರು ಬರುವಾಗ ತಮ್ಮೊಂದಿಗೆ ತಮ್ಮ ಗುರುವರ್ಯ ಸಹಜಬೋಧ ಸ್ವಾಮೀಜಿಯವರ ಪಾದುಕೆಗಳನ್ನು ನೆನಪಿಗಾಗಿ ತಂದಿದ್ದರು. ಅವು ಮೂಡಲಗಿಯ ಶ್ರೀಮಠದಲ್ಲಿ ಇಂದಿಗೂ ಪೂಜಿಸಲ್ಪಡುತ್ತವೆ.

ಶ್ರೀರಂಗಬೋಧರ ನಂತರ ಅದ್ವಯಬೋಧರು, ಶಿವಬೋಧರು, ಪಾಂಡುರಂಗ ಬೋಧರು, ಶಿವರಾಮಬೋಧರು, ಸಂಗಬೋಧರು, ತಮ್ಮಣ್ಣಬೋಧರು, ಕೊನೇರಿಬೋಧರು ಆಶ್ರಯಿಸಿದ್ದರು. 11ನೇ ಪೀಠಾಧಿಪತಿ ಕಲ್ಮೇಶ್ವರಬೋಧರು, ತರುವಾಯ 12ನೇ ಪೀಠಾಧಿಪತಿ ಶ್ರೀಪಾದಬೋಧ ಸ್ವಾಮೀಜಿಗಳು ಕಲೆ, ಸಾಹಿತ್ಯ, ಶಿಕ್ಷಣ ಪ್ರಸಾರ ಹಾಗೂ ಮಠದ ಉಜ್ವಲ ಪರಂಪರೆಯನ್ನು ಬೆಳೆಸಿದರು.

ಈಗಿನ ಉಭಯ ಪೀಠಾಧಿಪತಿಗಳಾದ ದತ್ತಾತ್ರಯಬೋಧ ಸ್ವಾಮೀಜಿ ಮತ್ತು ಶ್ರೀಧರಬೋಧ ಸ್ವಾಮೀಜಿ ಅವರು ಮಠದ ಧಾರ್ಮಿಕ, ಶೈಕ್ಷಣಿಕ, ದೇಸಿಯತೆ, ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸಿಕೊಂಡು ಹೊರಟಿದ್ದಾರೆ. ಹಿಂದೂ, ಮುಸ್ಲಿಂ ಸೇರಿದಂತೆ ಸರ್ವ ಧರ್ಮಿಯರು ಮಠದ ಆರಾಧಕರಾಗಿದ್ದರಿಂದ ಮಠವು ‘ಭಾವೈಕ್ಯತೆ ಮಠ’ ಎನ್ನುವ ಹೆಗ್ಗಳಿಕೆ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.