ಮೂಡಲಗಿ: ದೇವದಾಸಿ ಮಹಿಳೆಯರ ಮರು ಸಮೀಕ್ಷೆಯಲ್ಲಿ ಅನಧಿಕೃತವಾಗಿ ದಾಖಲಾಗುತ್ತಿರುವುದರಿಂದ ನಿಜವಾದ ದೇವದಾಸಿಯರು ಸರ್ಕಾರದಿಂದ ಸಿಗಬೇಕಾಗಿದ್ದ ಹಕ್ಕು ಹಾಗೂ ಸವಲತ್ತುಗಳಿಂದ ವಂಚಿತರಾಗುತ್ತಾರೆ ಎಂದು ಆರೋಪಿಸಿ ನಿಸರ್ಗ ಫೌಂಡೇಷನ್ ಅಧ್ಯಕ್ಷ ಈರಪ್ಪ ಢವಳೇಶ್ವರ ಸ್ಥಳೀಯ ತಹಶೀಲ್ದಾರ್ ಕಚೇರಿ ಆವರಣದಲ್ಲಿ ತಹಶೀಲ್ದಾರ್ ಶ್ರೀಶೈಲ್ ಗುಡಮೆ ಹಾಗೂ ಶಿಶು ಅಭಿವೃದ್ದಿ ಅಧಿಕಾರಿ ಯಲ್ಲಪ್ಪ ಗದಾಡಿ ಅವರಿಗೆ ಮನವಿ ನೀಡಿದರು.

ಈರಪ್ಪ ಢವಳೇಶ್ವರ ಮಾತನಾಡಿ, ‘ಅನೇಕ ಸಂಘ, ಸಂಸ್ಥೆಗಳು ಹಾಗೂ ನಮ್ಮ ಫೌಂಡೇಷನ್ ಮೂಲಕ ದೇವದಾಸಿಯರ ಪರವಾಗಿ ನಡೆಸಿದ ಹೋರಾಟದ ಫಲವಾಗಿ ಕಳೆದ ಮುಂಗಾರು ಅಧಿವೇಶನದಲ್ಲಿ ದೇವದಾಸಿಯರ ಮರು ಸಮೀಕ್ಷೆ ನಡೆಸಲು ಪೂರಕ ಮಾಹಿತಿಗಳನ್ನು ಒದಗಿಸಲು ವಿಲ್ ಮಂಡನೆ ಮಾಡಿದ್ದು ಸ್ವಾಗತಾರ್ಹ. ಆದರೆ ಮರು ಸಮೀಕ್ಷೆಯಲ್ಲಿ ಕೆಲ ವಿಚ್ಛೇದಿತ ಹಾಗೂ ವಿಧವಾ ಮಹಿಳೆಯರು ಅನಿಧಿಕೃತವಾಗಿ ತಾವೂ ದೇವದಾಸಿಯರು ಎಂದು ಅರ್ಜಿ ಸಲ್ಲಿಸುತ್ತಿರುವುದು ಖಂಡನಾರ್ಹ. ದೇವದಾಸಿಯರ ಸಮೀಕ್ಷೆಯು ಪಾರದರ್ಶಕವಾಗಿರಬೇಕು’ ಎಂದು ಒತ್ತಾಯಿಸಿದರು.

ಇದು ಮೂಡಲಗಿ ತಾಲ್ಲೂಕಿಗೆ ಮಾತ್ರ ಸಮಸ್ಯೆಯಾಗಿರದೆ ಉತ್ತರ ಕರ್ನಾಟಕದ 15 ಜಿಲ್ಲೆಗಳ ಸಮಸ್ಯೆಯಾಗಿದೆ. ಇಲಾಖೆಯು ಸರಿಯಾದ ಫಲಾನುಭವಿಗಳನ್ನು ಗುರುತಿಸಿ ಅಂಥವರಿಗೆ ಸೌಲಭ್ಯ ದೊರೆಯುವಂತೆ ಮಾಡಬೇಕು ಮನವಿಯಲ್ಲಿ ತಿಳಿಸಿದ್ದಾರೆ.

ಸುನೀಲ ಗಸ್ತಿ, ವಿಲ್ಸನ್ ಢವಳೇಶ್ವರ, ಅನಿಲ ಗಸ್ತಿ, ಯಮನಪ್ಪ ಮೇಸ್ತ್ರಿ, ಮಂಜು ದಂಗಗೋಳ, ಯಶೋಧಾ ಗಸ್ತಿ, ದೀಪಾ ತಳವಾರ ಮತ್ತಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-21-2009082230

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.