ಮೂಡಲಗಿ: ತಾಲ್ಲೂಕಿನ ನಾಗನೂರ ಗ್ರಾಮದ ಹನುಮಾನ್ ನಗರ ಬಳಿ ದ್ರಾಕ್ಷಿ ತುಂಬಿದ ಮಿನಿ ವಾಹನ, ಕಾರ್ ಹಾಗೂ ಬೈಕ್ ಮಧ್ಯದಲ್ಲಿ ಮಂಗಳವಾರ ಭೀಕರ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ಮೂವರು ತೀವ್ರ ಗಾಯಗೊಂಡಿದ್ದಾರೆ.

ಕಾರಿನಲ್ಲಿದ್ದ ರಾಯಬಾಗ ತಾಲ್ಲೂಕಿನ ಕಂಕಣವಾಡಿಯ ಶಿವಬಸು ಗಣಪತಿ ಚೌಗಲಾ (56) ಹಾಗೂ ಕಾರ್ ಚಾಲಕ ದೇವರಾಪಹಟ್ಟಿ ಗ್ರಾಮದ ರಾಮಪ್ಪ ಪವಾಡಿ ಮಾಂಗ (38) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಗೋಕಾಕ ಕಡೆಯಿಂದ ಮೂಡಲಗಿ ಕಡೆಗೆ ಬರುತ್ತಿದ್ದ ಕಾರ್ ಹಾಗೂ ಪಂಡರಪೂರದಿಂದ ಬೈಲಹೊಂಗಲಕ್ಕೆ ಹೊರಟ್ಟಿದ್ದ ದ್ರಾಕ್ಷಿ ತುಂಬಿದ್ದ ಮಿನಿ ವಾಹನ ಮಧ್ಯದಲ್ಲಿ ಅಪಘಾತ ಸಂಭವಿಸಿದೆ.

ಕಾರಿನಲ್ಲಿ ಕುಳಿತಿದ್ದ ಇಬ್ಬರು ಮಹಿಳೆಯರು ಹಾಗೂ ರಸ್ತೆ ಬದಿ ನಿಂತಿದ್ದ ಬೈಕ್ ಸವಾರ ಮುಗಳಖೋಡದ ಮಲ್ಲಪ್ಪ ಗುರಪ್ಪ ಬೀಸನಕೊಪ್ಪ ಅವರಿಗೆ ಗಾಯಗಳಾಗಿವೆ. ಎಲ್ಲರನ್ನೂ ಗೋಕಾಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾಹನದಲ್ಲಿದ್ದ ದ್ರಾಕ್ಷಿಯು ರಸ್ತೆ ತುಂಬೆಲ್ಲ ಚದುರಿ ಬಿದ್ದಿದ್ದರಿಂದ ದಾರಿಹೋಕರು ದ್ರಾಕ್ಷಿಗೆ ಮುಗಿಬಿದ್ದರು. ಇದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿತು. ಮೂಡಲಗಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಜನರನ್ನು ಚದುರಿಸಿ ಸಂಚಾರ ಸುಗಮಗೊಳಿಸಿದ್ದಾರೆ. ಉಸಿರಾಟ ತೊಂದರೆಯಲ್ಲಿದ್ದ ಅಪಘಾತಕ್ಕೀಡಾದ ವ್ಯಕ್ತಿಯೊಬ್ಬರಿಗೆ ಸ್ಥಳೀಯ ಎಂಬಿಬಿಎಸ್ ಓದುತ್ತಿರುವ ದೀಪಾ ಪಾಟೀಲ ಪ್ರಾಥಮಿಕ ಚಿಕಿತ್ಸೆ ನೀಡಿ ಪ್ರಾಣಾಪಯದಿಂದ ಪಾರು ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ಪತ್ರಿಕೆಗೆ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-21-843766838

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.