ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ : 23–2–1968

Last Updated 22 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಅಸಮ ಭಾಷಾ ಹೊರೆ ನಿವಾರಿಸಲು ಯತ್ನ: ಮುಖ್ಯಮಂತ್ರಿ ಪ್ರಕಟಣೆ

ಬೆಂಗಳೂರು, ಫೆ. 22: ಭಾಷೆ ಸಂಬಂಧದಲ್ಲಿ ಹಿಂದಿ ಮತ್ತು ಹಿಂದಿಯೇತರರಲ್ಲಿರುವ ಅಸಮಾನತೆಯನ್ನು ನಿವಾರಿಸಲು ತಾವು ಯತ್ನಿಸಿರುವುದಾಗಿ ಮುಖ್ಯಮಂತ್ರಿ ಶ್ರೀ ಎಸ್‌. ನಿಜಲಿಂಗಪ್ಪನವರು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿದರು.

ಅಖಿಲಭಾರತ ಕಾಂಗ್ರೆಸ್‌ ಅಧ್ಯಕ್ಷರೂ ಆದ ಅವರು ‘ಅವರಿಗಿರುವಷ್ಟು ಭಾರ ನಮಗೂ ಇರಬೇಕು. ನಮಗಿರುವಷ್ಟು ಭಾರ ಅವರಿಗೂ ಇರಬೇಕು’ ಎಂದು ಸ್ಪಷ್ಟಪಡಿಸಿದರು.

‘ಹಿಂದಿ ಮತ್ತು ಇಂಗ್ಲೀಷ್‌ ಎರಡೇ ಅಲ್ಲ. ದಕ್ಷಿಣ ಭಾರತದ ನಾಲ್ಕು ಭಾಷೆಗಳಿವೆ ಮರಾಠಿ, ಬಂಗಾಳಿ, ಒರಿಯಾ ಮುಂತಾದ ಭಾಷೆಗಳಿವೆ. ಅವರೂ (ಹಿಂದೀ ರಾಜ್ಯದವರು) ಇತರ ಭಾಷೆಗಳನ್ನು ಕಲಿಯಬೇಕಾದುದು ಅಗತ್ಯ’ ಎಂದರು.

ವಿಶ್ವಕೋಶ ಹೊಣೆ ಮೈಸೂರು ಯುನಿವರ್ಸಿಟಿಗೆ

ಬೆಂಗಳೂರು, ಫೆ. 22– ಕನ್ನಡ ವಿಶ್ವಕೋಶ ನಿರ್ಮಾಣದ ಕೆಲಸವನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ವಹಿಸಲು ಸರಕಾರ ನಿರ್ಧರಿಸಿದೆಯೆಂದು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

‘ಮೂರು ವರ್ಷದಲ್ಲಿ ವಿಶ್ವವಿದ್ಯಾನಿಲಯವು ವಿಶ್ವಕೋಶದ ಕೆಲಸವನ್ನು ಮುಗಿಸುವುದೆಂಬ ವಿಶ್ವಾಸ ನನಗಿದೆ’ ಎಂದರು.

ಭಾಷಾ ಪ್ರಶ್ನೆ ಕುರಿತು ವಿಧಾನಮಂಡಲದಲ್ಲಿ ಅಧಿಕೃತ ನಿರ್ಣಯ ಸಂಭವ

ಬೆಂಗಳೂರು, ಫೆ. 22– ಭಾಷಾ ಸಮಸ್ಯೆಯ ಸಂಬಂಧದಲ್ಲಿ ಕೇಂದ್ರ ಸರ್ಕಾರಕ್ಕೆ ರಾಜ್ಯದ ಅಭಿಪ್ರಾಯವನ್ನು ತಿಳಿಸಲು ವಿಧಾನಮಂಡಲದಲ್ಲಿ ನಿರ್ಣಯವನ್ನು ಮಂಡಿಸುವ ವಿಚಾರವನ್ನು ಪರಿಶೀಲಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಇಂದು ವಿಧಾನಪರಿಷತ್ತಿನಲ್ಲಿ ತಿಳಿಸಿದರು.

ಕೇರಳದ ಹೊಸ ವಿಶ್ವವಿದ್ಯಾನಿಲಯದ ಉಪಕುಲಪತಿ ಆಗಿ ಕೃಷ್ಣಮೆನನ್‌?

ಪೆಂಡಾಲ, ಫೆ. 22– ಕೇಂದ್ರದ ಮಾಜಿ ರಕ್ಷಣಾಸಚಿವ ಶ್ರೀ ವಿ.ಕೆ. ಕೃಷ್ಣ ಮೆನನ್‌ ಅವರಿಗೆ ಹೊಸ ಹುದ್ದೆಯೊಂದು ದೊರಕುವ ಸಂಭವವಿದೆ.

ಎರ್ನಾಕುಲಂ ಅಥವಾ ಕಲ್ಲಿಕೋಟೆಯಲ್ಲಿ ಹೊಸದಾಗಿ ಸ್ಥಾಪಿಸಲಾಗುವ ವಿಶ್ವವಿದ್ಯಾನಿಲಯಕ್ಕೆ ಶ್ರೀ ಮೆನನ್‌ ಅವರನ್ನು ಉಪಕುಲಪತಿಯನ್ನಾಗಿ ನೇಮಿಸುವ ನಿರೀಕ್ಷೆ ಇದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT