ಮೂಡಲಗಿ: ಸಮೀಪದ ಢವಳೇಶ್ವರದಲ್ಲಿ ಮಹಾಲಕ್ಷ್ಮೀದೇವಿಗೆ ನೈವೇದ್ಯ, ಉಡಿ ತುಂಬುವ ಕಾರ್ಯಕ್ರಮ ಹಾಗೂ ದಾಸೋಹರತ್ನ ಬಸವಗೋಪಾಲ ದಾನೇಶ್ವರರ ದ್ವಿತೀಯ ಪಾರಮಾರ್ಥಿಕ ಸಪ್ತಾಹ ಜರುಗಿತು.

ಸವದಿ–ಬಂಡಿಗಣಿಯ ದಾನೇಶ್ವರ ಅಭಿವೃದ್ಧಿ ಸೇವಾ ಸಂಘದ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಬೈಕ್ ರ್ಯಾಲಿಯಲ್ಲಿ ದಾನೇಶ್ವರ ಅಪ್ಪಾಜಿ ಹಾಗೂ ಸುಮಂಗಲಾ ತಾಯಿಯವರ ಚಿತ್ರಗಳನ್ನು ಗ್ರಾಮಕ್ಕೆ ಬರಮಾಡಿಕೊಂಡರು.ಬಬಲಾದಿಯ ಮುಂಡಿಗೆಯೊಂದಿಗೆ ಸಪ್ತಾಹ ಕಾರ್ಯಕ್ರಮವು ಪ್ರಾರಂಭಗೊಂಡಿತು.

ಅರಭಾವಿಯ ಬಸವಗೋಪಾಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಾನಿಂಗ ಮೂಡಲಗಿ ಮಾತನಾಡಿ, ‘ಬಸವಗೋಪಾಲ ಅಪ್ಪಾಜಿ ಅವರು ನಡೆದ ದಾರಿಯಲ್ಲಿ ಟ್ರಸ್ಟ್ವು ಸಹ ನಿರಂತರ ಸಪ್ತಾಹ, ದಾಸೋಹ, ಅನುಭವ ಗೋಷ್ಠಿ, ವಸ್ತ್ರದಾನ, ಶಿಕ್ಷಣ ಪ್ರಸಾರ, ಅನಾಥಾಶ್ರಮ, ಆಶ್ರಯ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತದೆ. ಎಲ್ಲ ಕಾರ್ಯಗಳಿಗೆ ಭಕ್ತರೆಲ್ಲರೂ ಕೈಜೋಡಿಸಿ ಯಶಸ್ಸಿಗೊಳಿಸಿರುವಿರಿ ಎನ್ನುವ ಆಶಯ ನಮ್ಮದಾಗಿದೆ. ಅಪ್ಪಾಜಿಯವರ ಸನ್ಮಾರ್ಗದಲ್ಲಿ ಸಾಗೋಣ’ ಎಂದರು.

ಟ್ರಸ್ಟ್ ಅಧ್ಯಕ್ಷ ಅಲ್ಲಪ್ಪ ಗಣೇಶವಾಡಿ, ಉಪಾಧ್ಯಕ್ಷ ಶಿವಕುಮಾರ ಪಾಟೀಲ, ಸದಸ್ಯರು, ಮಹಾಲಿಂಗ ಪಟ್ಟಣಶೆಟ್ಟಿ, ರಾಮಚಂದ್ರ ಯರಗಟ್ಟಿ, ಶ್ರೀಶೈಲ್ ಬ್ಯಾಳಿ ಇದ್ದರು. ಕಾರ್ಯಕ್ರಮದ ನಂತರ ಮಹಾಪ್ರಸಾದ ಜರುಗಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-21-1689248900

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.