ಮೂಡಲಗಿ: ‘ಭಗವಾನ ಸತ್ಯಸಾಯಿ ಬಾಬಾರವರ ಜನ್ಮ ಶತಮಾನೋತ್ಸವದ ಅಂಗವಾಗಿ ಪುಟ್ಟಪರ್ತಿಯಿಂದ ಹೊರಟಿರುವ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆಯು ಏ. 7ರಂದು ಮೂಡಲಗಿಗೆ ಆಗಮಿಸಲಿದೆ’ ಎಂದು ಮೂಡಲಗಿ ಸತ್ಯಸಾಯಿ ಸಮಿತಿಯ ಸಂಚಾಲಕ ಹಣಮಂತ ಸೊರಗಾಂವಿ ಅವರು ಹೇಳಿದರು.

ಇಲ್ಲಿನ ಸಾಯಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಏ. 7ರಂದು ಬೆಳಿಗ್ಗೆ 9ಕ್ಕೆ ನಾಗನೂರ ಬಳಿಯಲ್ಲಿ ಸ್ವಾಗತಿಸಿ ಮೂಡಲಗಿಯ ಎಸ್ಎಸ್ಆರ್ ಕಾಲೇಜುವರೆಗೆ ಬರಮಾಡಿಕೊಂಡು ಅಲ್ಲಿಂದ ಆರತಿ, ಕುಂಭಮೇಳ, ಮಂಗಲವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ಜರುಗುವುದು. ಕಲ್ಮೇಶ್ವರ ವೃತ್ತ, ಕಿತ್ತೂರ ರಾಣಿ ಚನ್ನಮ್ಮ ವೃತ್ತ, ಕರೆಮ್ಮಾದೇವಿ ವೃತ್ತ, ಸಂಗಪ್ಪಣ್ಣ ಅಂಗಡಿ ವೃತ್ತ, ಕಲ್ಮೇಶ್ವರ ವೃತ್ತ ಮೂಲಕ ಹಾಯ್ದು ಸಾಯಿಮಂದಿರಕ್ಕೆ ಬರಮಾಡಿಕೊಂಡು ಸಾಯಿಮಂದಿರ ಹತ್ತಿರ ಸಮಾವೇಶಗೊಳ್ಳುವುದು’ ಎಂದು ತಿಳಿಸಿದರು.

ಶೋಭಾಯಾತ್ರೆ ಉದ್ಘಾಟನೆ, ಆಧ್ಯಾತ್ಮಿಕ ಚಿಂತನ ಸಭೆ: ಬೆಳಿಗ್ಗೆ 9.30ಕ್ಕೆ ದತ್ತಾತ್ರೇಯಬೋಧ ಸ್ವಾಮೀಜಿ, ಶ್ರೀಧರಬೋಧ ಸ್ವಾಮೀಜಿ ಶೋಭಾಯಾತ್ರೆಯ ಉದ್ಘಾಟನೆ ಮಾಡುವರು. ಸುಣಧೋಳಿಯ ಶಿವಾನಂದ ಸ್ವಾಮೀಜಿ, ಶಾಸಕ ಬಾಲಚಂದ್ರ ಜಾರಕಿಹೊಳಿ, ಸತ್ಯಸಾಯಿ ಸೇವಾ ಸಂಸ್ಥೆ ರಾಜ್ಯ ಘಟಕದ ಅಧ್ಯಕ್ಷ ಪದ್ಮನಾಭ ಪೈ, ರಾಜ್ಯ ಸೇವಾ ಸಂಯೋಜಕಿ ಪ್ರಿಯಾ ಪಿ. ಪೈ, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ವಸಂತ ಬಾಳಿಗಾ ಭಾಗವಹಿಸುವರು ಎಂದು ತಿಳಿಸಿದರು.

ಕೃಷ್ಣಾ ಬಿ. ನಾವಳ್ಳಿ, ಐ.ಎ.ಪಾಟೀಲ, ರವಿ ನಂದಗಾಂವಿ, ಬಾಳಪ್ಪ ನಂದಿ, ಸಂಜಯ ಸೋನವಾಲಕರ, ಲಕ್ಷ್ಮಣ ಕಂಕಣವಾಡಿ, ಮಲ್ಲಪ್ಪ ಮುರಗೋಡ, ಗಾಯಕ ಕೋತಿನ, ಮಹೇಶ ಹಿರೇಮಠ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-21-1084148684

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.