ಮೂಡಲಗಿ: ತಾಲ್ಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ₹2.45 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ‘ತುಕ್ಕಾನಟ್ಟಿ ಗ್ರಾಮ ಅಭಿವೃದ್ಧಿಗೆ ನಿರಂತರವಾಗಿ ಸ್ಪಂದಿಸಿದ್ದು, ಹಲವಾರು ಜನಪರ ಯೋಜನೆಗಳು ಜಾರಿಯಾಗಿವೆ. ಈಗ ಮತ್ತೆ ರಸ್ತೆಗಳ ಅಭಿವೃದ್ಧಿಗೆ ₹2.40 ಕೋಟಿ ಅನುದಾನವನ್ನು ಮಂಜೂರಾತಿ ಪಡೆಯಲಾಗಿದೆ’ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಅನುದಾನದಡಿ ಪರಿಶಿಷ್ಟ ಜಾತಿ ಕಾಲೊನಿಗೆ ಮೂಲ ಸೌಕರ್ಯ ಕಲ್ಪಿಸಲು ₹25 ಲಕ್ಷ ವೆಚ್ಚದಲ್ಲಿ ತುಕ್ಕಾನಟ್ಟಿಯಿಂದ ರಾಜಾಪುರ ರಸ್ತೆಯಿಂದ ದುರ್ಗಾದೇವಿ ದೇವಸ್ಥಾನದ ವರೆಗೆ ಕಾಂಕ್ರೀಟ್ ರಸ್ತೆ ಮತ್ತು ಒಳಚರಂಡಿ ನಿರ್ಮಾಣ, ತುಕ್ಕಾನಟ್ಟಿ ಗ್ರಾಮದ ರಸ್ತೆಗಳ ಡಾಂಬರೀಕರಣಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಮಂಜೂರಾಗಿರುವ ₹2.15 ಕೋಟಿ ಅನುದಾನ ಕಾಮಗಾರಿಗಳು ಹಾಗೂ ₹50 ಲಕ್ಷ ವೆಚ್ಚದಲ್ಲಿ ತುಕ್ಕಾನಟ್ಟಿ ಗ್ರಾಮದ ಗದಾಡಿ ತೋಟದ ಕಾಲುವೆಯಿಂದ ಸತ್ತೆಪ್ಪ ಬಿಲಕಾರ ಮನೆಯವರೆಗೆ ಡಾಂಬರೀಕರಣ, ₹90 ಲಕ್ಷ ವೆಚ್ಚದಲ್ಲಿ ವಡೇರಹಟ್ಟಿ ಕಾಲುವೆಯಿಂದ ಅರ್ಜುನ ಉಪ್ಪಾರ ವ್ಹಾಯಾ ಲಕ್ಷ್ಮಣ ಹುಲಕುಂದ ಮನೆತನಕ ರಸ್ತೆ ಡಾಂಬರೀಕರಣ, ₹75 ಲಕ್ಷ ವೆಚ್ಚದಲ್ಲಿ ತುಕ್ಕಾನಟ್ಟಿ ಗ್ರಾಮದ ಘಟಪ್ರಭಾ ರಸ್ತೆಯಿಂದ ಮರ್ದಿ( ಭೀಮಶೆಪ್ಪಗೋಳ) ಮನೆಯವರೆಗೆ ರಸ್ತೆ ಕಾಮಗಾರಿಗಳಿಗೆ ಶಾಸಕರು ಭೂಮಪೂಜೆ ನೆರವೇರಿಸಿದರು.

ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ₹5 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ಶೆಲ್ಟರನ್ನು ಶಾಸಕರು ಉದ್ಘಾಟಿಸಿದರು. ಮುಖಂಡರಾದ ಸಿದ್ದಪ್ಪ ಹಮ್ಮನವರ, ಶಿವಪ್ಪ ಮರ್ದಿ, ಸೋಮು ಹುಲಕುಂದ, ಅಜ್ಜಪ್ಪ ಮನ್ನಿಕೇರಿ, ಡಾ. ವಸಂತ ನಾಯಿಕವಾಡಿ, ಕುಮಾರ ಮರ್ದಿ, ಮಂಜುನಾಥ ಗದಾಡಿ, ರಾಮಪ್ಪ ಬಾಗೇವಾಡಿ, ಯಲ್ಲಪ್ಪ ಹುಲಕುಂದ, ಸತ್ತೆಪ್ಪ ಮಲ್ಲಾಪೂರ, ಸುನಂದಾ ಭಜಂತ್ರಿ, ಪರಶುರಾಮ ಗದಾಡಿ, ಲಗಮಪ್ಪ ಭೋಜ, ರಾಮಚಂದ್ರ ಮದಿಹಳ್ಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-21-296091670

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.