ಬಾಲಶೇಖರ ಬಂದಿ

ಮೂಡಲಗಿ: ‘ಹಗ್ಗ ಕಟ್ಟಿ ಎಳೆಯದೆ ರಥೋತ್ಸವ ಜರುಗುವುದು’ ಎನ್ನುವ ಪ್ರತೀತಿ ಹೊಂದಿರುವ ತಾಲ್ಲೂಕಿನ ಸುಣಧೋಳಿಯ ಪವಾಡ ಪುರುಷ ಜಡಿಸಿದ್ಧೇಶ್ವರ ಜಾತ್ರೆಯ ರಥೋತ್ಸವ ಏ.6ರಂದು ಸಂಜೆ 5ಕ್ಕೆ ಪೀಠಾಧಿಪತಿ ಶಿವಾನಂದ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಜರುಗಲಿದೆ.

ಪ್ರತಿ ವರ್ಷವೂ ದವನದ ಹುಣ್ಣಿಮೆ ಮುಗಿದ ನಾಲ್ಕನೇ ದಿನಕ್ಕೆ ಜರುಗುವ ಜಾತ್ರೆಯ ರಥೋತ್ಸವಕ್ಕೆ ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಿಂದ ಸಾಗರೋಪಾದಿಯಲ್ಲಿ ಭಕ್ತರು ಸೇರುವರು.

ಹಿನ್ನೆಲೆ: ಕ್ರಿ.ಶ 14ನೇ ಶತಮಾನದಲ್ಲಿ ಶಿವನು ಜಡಿಸಿದ್ಧೇಶ್ವರರ ರೂಪದಲ್ಲಿ ಭೂಮಿಯ ಮೇಲೆ ಅವತರಿಸಿ, ಲೋಕಕಲ್ಯಾಣಕ್ಕಾಗಿ ಸಂಚರಿಸುತ್ತ ದಟ್ಟ ಕಾನನ ಮಧ್ಯೆ ಬಂದು ತಪಸ್ಸು ಮಾಡಿರುವ ಸ್ಥಳವೇ ಈಗಿನ ಸುಣಧೋಳಿ ಎಂಬುದು ಐತಿಹ್ಯ. ಇದೇ ಸ್ಥಳದಲ್ಲಿ ಅವರು ಪ್ರಾಣ ತ್ಯಾಗ ಮಾಡಿದ್ದು, ಅದೇ ಸ್ಥಳದಲ್ಲಿ ಭಕ್ತರು ಲಿಂಗವನ್ನು ಸ್ಥಾಪಿಸಿ ದೇವಸ್ಥಾನ ನಿರ್ಮಿಸಿದ್ದರು. ಮುಂದೆ ಹಲವು ದಶಕಗಳ ನಂತರ ರಥವನ್ನು ಮಾಡಿ ಜಡಿಸಿದ್ದೇಶ್ವರರ ಮೂರ್ತಿಯನ್ನು ಇಟ್ಟು ಹಗ್ಗದಿಂದ ರಥವನ್ನು ಎಳೆದು ರಥೋತ್ಸವ ಮಾಡಿ ಭಕ್ತಿಯನ್ನು ಸಮರ್ಪಿಸುತ್ತಿದ್ದರು.

ಬ್ರಿಟಿಷರ್ ಆಡಳಿತದ ಅವಧಿಯಲ್ಲಿ ಜಾತ್ರೆ ಸಮಯದಲ್ಲಿ ಪ್ಲೇಗ್ ಸೋಂಕು ಹರಡಿದ್ದರಿಂದ ಜಾತ್ರೆಯನ್ನು ಮಾಡದಂತೆ ಹಾಗೂ ರಥವನ್ನು ಎಳೆಯದಂತೆ ಬ್ರಿಟಿಷ್ ಆಡಳಿತವು ಭಕ್ತರಿಗೆ ಎಚ್ಚರಿಕೆ ನೀಡಿತ್ತು. ಇದರಿಂದ ಭಕ್ತರಲ್ಲಿ ಆತಂಕ ಮೂಡಿತು. ಅನಿವಾರ್ಯವಾಗಿ ಭಕ್ತರು ಅದಕ್ಕೆ ಒಪ್ಪಿ ಕೇವಲ ಜಡಿಸಿದ್ದೇಶ್ವರರ ಮೂರ್ತಿ ಮತ್ತು ರಥದ ಗಾಲಿಗಳಿಗೆ ಪೂಜೆ ಮಾಡುವ ಅನುಮತಿಯನ್ನು ಮಾತ್ರ ಪಡೆದು ಸಿದ್ದತೆ ಮಾಡಿಕೊಂಡಿದ್ದರು.

ರಥ ಎಳೆಯದಂತೆ ಬ್ರಿಟಿಷ್ ಅಧಿಕಾರಿ ಆದೇಶ ಹೊರಡಿಸಿದ್ದರಿಂದ ಭಕ್ತರು ಕೈ ಜೋಡಿಸಿ ‘ಹರಹರ ಮಹಾದೇವ, ಜಡಿಸಿದ್ಧೇಶ್ವರ ಮಹಾರಾಜಕೀ ಜೈ’ ಎಂದು ಘೋಷಣೆ ಹಾಕಿದರು. ಆಗ ರಥವು ಸ್ವಯಂ ಚಲಿಸಿ, ಮರಳಿ ತನ್ನ ಸ್ಥಾನಕ್ಕೆ ಬಂದು ನಿಂತಿತು ಎಂಬ ಭಕ್ತರ ನಂಬಿಕೆ ಗಟ್ಟಿಯಾಗಿ ಉಳಿದುಕೊಂಡು ಬಂದಿದೆ. ಈ ಮಾತು 120 ವರ್ಷ ಹಿಂದಿನದು. ಈಗಲೂ ರಥಕ್ಕೆ ಹಗ್ಗ ಕಟ್ಟದೆಯೇ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷ.

ಜಾತಿ, ಮತ, ಧರ್ಮ ಎಂದು ಭೇದ ಮಾಡದೆ ಎಲ್ಲ ಸಮಾಜದ ಜನರು ಮಠಕ್ಕೆ ಭಕ್ತರಿದ್ದು ಮಠವು ಭಾವೈಕ್ಯತೆಗೂ ಹೆಸರಾಗಿದೆ. ಮಠದಲ್ಲಿ ನಿತ್ಯ ದಾಸೋಹ ಇರುವುದು. ಸರಳತೆಗೆ ಹೆಸರಾಗಿರುವ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಮಠದ ಮಹಿಮೆ, ಸಂಪ್ರದಾಯಗಳನ್ನು ನಡೆಸಿಕೊಂಡು ಸುಣಧೋಳಿಯ ಪುಣ್ಯಕ್ಷೇತ್ರವನ್ನಾಗಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-21-304293699

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.