ಮುಗಳಖೋಡ: ‘ಶಿಕ್ಷಣವು ಸಮಾಜದ ಪ್ರತಿಯೊಬ್ಬರಿಗೂ ಅವಶ್ಯ. ಶಿಕ್ಷಣವನ್ನು ಪಡೆದ ಪ್ರತಿ ವ್ಯಕ್ತಿ ಸಮಾಜಕ್ಕೆ ತನ್ನದೇ ಆದ ವಿಶೇಷ ಕೊಡುಗೆ ನೀಡುವುದರ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ’ ಎಂದು ರವಿ ಇಚಲಕರಂಜಿ ಹೇಳಿದರು.

ಸಮೀಪದ ಯಲ್ಪಾರಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಉನ್ನತೀಕರಿಸಿದ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ರಾಯಬಾಗದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಬಸವರಾಜಪ್ಪ ಮಾತನಾಡಿ, ‘ಸರ್ಕಾರಿ ಶಾಲೆಗಳಲ್ಲಿ ಪರಿಣತ ಶಿಕ್ಷಕರು ಇದ್ದಾರೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದು ಜಾಣತನ’ ಎಂದರು.

ಪಿಎಸ್ಐ ದೀಪಾಲಿ ಗುಡೋಡಗಿ ಮಾತನಾಡಿದರು. ಪ್ರೌಢಶಾಲೆಗೆ ₹3 ಲಕ್ಷ ದೇಣಿಗೆಯು ಸಂಗ್ರಹವಾಗಿದ್ದು, ದಾನಿಗಳಿಗೆ ಸತ್ಕರಿಸಲಾಯಿತು.

ಆನಂದ ಪಟಾಯತ್, ಮಲಕಾರಿ ದಳವಾಯಿ, ಲಕ್ಕಪ್ಪ ಬಿದರಿ, ವಿಠ್ಠಲ್ ತೆರದಾಳೆ, ಲಕ್ಷ್ಮಿಕಾಂತ್ ಬಿಸ್ವೇಗಾರ, ಅಶೋಕ್ ಗುಡೋಡಗಿ, ಅನಿಲ್ ಒಡೆಯರ್ ಹಾಗೂ ಗ್ರಾಮಸ್ಥರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-21-1653152613

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.