ಬುಧವಾರ, ಮೇ 25, 2022
26 °C

ಕಾನ್‌ಸ್ಟೆಬಲ್ ನೌಕರಿ ನಿರಾಕರಿಸಿದ್ದ ಯುವತಿ ಪಿಎಸ್‌ಐಗೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಗಳಖೋಡ: ಪಟ್ಟಣದ ಬಡ ಕುಟುಂಬದ ಯುವತಿ ಪ್ರೀತಿ ಮಲ್ಲ‍ಪ್ಪ ಬಾಳೋಜಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 25ನೇ ‍ರ‍್ಯಾಂಕ್ ಗಳಿಸಿ ಪಿಎಸ್‌ಐ ನೌಕರಿಗೆ ಆಯ್ಕೆಯಾಗಿದ್ದಾರೆ.

ಗುಡಿಸಲಲ್ಲಿ ವಾಸಿಸುತ್ತಾ, ಮನೆ–ಕೃಷಿ ಕೆಲಸ ಮಾಡುತ್ತಾ ಓದಿ ಸಾಧನೆ ತೋರಿ ಗಮನಸೆಳೆದಿದ್ದಾರೆ. 25 ವರ್ಷದ ಈ ಯುವತಿ 2 ಬಾರಿ ಸಿಕ್ಕಿದ್ದ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್‌ ಕೆಲಸವನ್ನು ನಿರಾಕರಿಸಿದ್ದರು. ಪಿಎಸ್‌ಐ ಹುದ್ದೆ ಗಿಟ್ಟಿಸಿಕೊಳ್ಳಲೇಬೇಕು ಎಂದು ಹಟದಿಂದ ಧಾರವಾಡದಲ್ಲಿದ್ದುಕೊಂಡು ಓದಿ ಪರಿಶ್ರಮದಿಂದ ಯಶಸ್ಸು ಗಳಿಸಿದ್ದಾರೆ.

ಸ್ವಂತ ಊರು ಮುಗಳಖೊಡವಾದರೂ ಅಜ್ಜಿ ಶಾಂತವ್ವ ಲಕ್ಕಪ್ಪ ಪಾಟೀಲ ಅವರ ಆಶ್ರಯದಲ್ಲಿ ಅಥಣಿ ತಾಲ್ಲೂಕಿನ ಖವಟಕೊಪ್ಪ ಗ್ರಾಮದಲ್ಲಿದ್ದರು. ಪ್ರಾಥಮಿಕ ಶಿಕ್ಷಣವನ್ನು ಅಲ್ಲೇ ಪಡೆದಿದ್ದರು. ಸಂಕ್ರಟ್ಟಿ ಗ್ರಾಮದಲ್ಲಿ ಪ್ರೌಢಶಾಲಾ ಶಿಕ್ಷಣ, ಎಸ್ಎಂಎಸ್ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ, ಜಮಖಂಡಿಯ ಬಿಎಲ್‌ಡಿ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ ಪಡೆದಿದ್ದಾರೆ.

‘ತಂದೆ–ತಾಯಿ, ಅಜ್ಜಿ ಶಾಂತವ್ವ, ಸೋದರ ಮಾವನ ಮಾರ್ಗದರ್ಶನ, ಸತತ ಅಧ್ಯಯನದಿಂದ ಕನಸು ನನಸಾಗಿದೆ’ ಎಂದು ಪ್ರೀತಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.