ಬೆಳಗಾವಿ: ‘ನಗರದಲ್ಲೇ 2,900 ಮ್ಯೂಲ್ ಅಕೌಂಟ್ಗಳು (ಅಮಾಯಕರ ಬ್ಯಾಂಕ್ ಖಾತೆಗಳನ್ನು ಅಕ್ರಮವಾಗಿ ಬಳಸಿಕೊಳ್ಳುವುದು) ಕ್ರಿಯಾಶೀಲವಾಗಿವೆ. ಇವೆಲ್ಲವನ್ನೂ ಸೈಬರ್ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಹಲವು ಅಮಾಯಕರು ಗೊತ್ತಿಲ್ಲದೆಯೇ ಈ ಸುಳಿಯಲ್ಲಿ ಸಿಕ್ಕಿಕೊಳ್ಳುವ ಆತಂಕ ಇದೆ’ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ತಿಳಿಸಿದರು.

‘ನಗರದ ಯುವಕನೊಬ್ಬ ಕಮಿಷನ್ ಆಸೆಗಾಗಿ 9 ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ, ಆ ಖಾತೆಗಳ ವಿವರವನ್ನು ಸೈಬರ್ ವಂಚಕರಿಗೆ ಕೊಟ್ಟಿದ್ದಾನೆ. ಸೈಬರ್ ವಂಚಕರು ಕನ್ನ ಹಾಕಿದ್ದ ₹80 ಲಕ್ಷ ಹಣವನ್ನು ಈ 9 ಖಾತೆಗಳಿಗೆ ಹಾಕಿದ್ದಾರೆ. ಈ ಖಾತೆಗಳಿಗೆ ಹಣ ಬಂದ ಮೇಲೆ ಅದನ್ನು ತಮ್ಮ ಸ್ವಂತಕ್ಕೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಸಿಇಎನ್ ಪೊಲೀಸರು ಕೈಗೊಂಡ ತನಿಖೆಯಲ್ಲಿ ಇದು ಹೊರಬಿದ್ದಿದೆ’ ಎಂದು ವಿವರಿಸಿದರು.

‘ಹಲವು ಯುವಜನರು ಕಮಿಷನ್ ಸಿಗುತ್ತದೆ ಎಂಬ ಆಸೆಗೆ ಬಿದ್ದು ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ಅಪರಾಧಿಗಳಿಗೆ ಕೊಡುತ್ತಿದ್ದಾರೆ. ಇದು ಕೂಡ ಅಪರಾಧವೇ ಆಗುತ್ತದೆ. ಅವರು ಖಾತೆಗಳನ್ನು ಯಾವ ಉದ್ದೇಶಕ್ಕೆ ಬಳಸುತ್ತಾರೆ ಎಂಬುದು ಗೊತ್ತಿಲ್ಲದೆಯೂ ಕೆಲವರು ಸಿಕ್ಕಿಕೊಂಡಿದ್ದಾರೆ. ಇಂಥವರ ಬಗ್ಗೆ ಜಾಗೃತರಾಗಿ ಇರಬೇಕು’ ಎಂದು ಹೇಳಿದರು.

‘ದುಬೈನಲ್ಲಿರುವ ಯುವಕನೊಬ್ಬ ತನ್ನ ತಾಯಿ ಮೂಲಕ ಸ್ವಸಹಾಯ ಸಂಘದ ಹೆಸರಿನಲ್ಲಿ ಬೆಳಗಾವಿಯಲ್ಲಿ ಬ್ಯಾಂಕ್ ಖಾತೆ ತೆರೆದಿದ್ದಾನೆ. ಅದಕ್ಕೆ ವಂಚನೆಯ ಹಣ ವರ್ಗಾಯಿಸಿಕೊಂಡಿದ್ದು ತನಿಖೆಯಿಂದ ಗೊತ್ತಾಗಿದೆ. ಮತ್ತೆ ಕೆಲವರಿಗೆ ಮನೆಯಲ್ಲೇ ಕೆಲಸ ಕೊಡುತ್ತೇವೆ ಎಂದು ನಂಬಿಸಿ, ಕಮಿಷನ್ ಆಸೆ ತೋರಿಸಿ ವಂಚನೆ ಮಾಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.