ಮುನವಳ್ಳಿ: ರಾಜ್ಯಹೆದ್ದಾರಿಯ ಕೆ.ಇ.ಬಿ ಕ್ರಾಸ್ನಲ್ಲಿ ನಡೆದ ರೈತರ ಆಹೋರಾತ್ರಿ ಧರಣಿ ಸತ್ಯಾಗ್ರಹವು ಶಾಸಕರ ಭರವಸೆಯ ಮೇರೆಗೆ ಭಾನುವಾರ ಮುಕ್ತಾಯಗೊಂಡಿತು.

ಸತ್ಯಾಗ್ರಹ ವೇದಿಕೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಮಲಪ್ರಭಾ ಬಲದಂಡೆ ಕಾಲುವೆಯ ಸೈಫನ್ ದುರಸ್ತಿ ಕಾಮಗಾರಿಗೆ ಅಂದಾಜು ₹19 ಕೋಟಿ ವೆಚ್ಚದ ಪ್ರಸ್ತಾವನೆಗೆ ಸರ್ಕಾರದ ಅನುಮೋದನೆ ದೊರತಿದೆ. ತಾಂತ್ರಿಕ ಪ್ರಕ್ರಿಯೆಗಳು ಮುಗಿದ ತಕ್ಷಣ ಒಂದು ವಾರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ನೀರಾವರಿ ಇಲಾಖೆಯ ಪ್ರಗತಿ ಗಮನಿಸಿದ್ದು, ಕಾಲುವೆಯ ಸೈಫನ್ ದುರಸ್ತಿಯನ್ನು ಶೀಘ್ರ ಮಾಡಲಾಗುವುದು ಎಂದರು.

ಮಲಪ್ರಭಾ ಜಲಾಶಯದ ಬಲದಂಡೆ ಕಾಲುವೆಯ ಸೈಫನ್ ದುರಸ್ತಿ ವಿಳಂಬದಿಂದ ಶಿಂದೋಗಿ, ಮುನವಳ್ಳಿ, ಯಕ್ಕೇರಿ, ಹಿರೂರ, ಹಳ್ಳೂರ, ಭಂಡಾರಹಳ್ಳಿ, ತೆರೆದಕೊಪ್ಪ, ಬೋಚಬಾಳ, ಇನ್ನು ಹಲವಾರು ಗ್ರಾಮಗಳ ರೈತರ ಜಮೀನುಗಳಿಗೆ ನೀರು ತಲುಪಲು ಐದು ವರ್ಷಗಳಿಂದ ತೊಂದರೆಯಾಗಿದೆ. ರೈತರ ನೋವು ನನಗೆ ಅರ್ಥವಾಗಿದೆ, ಹೋರಾಟ ನಿರತ ರೈತರೊಂದಿಗೆ ಚರ್ಚಿ ಅಹವಾಲು ಸ್ವೀಕರಿಸಿದ್ದೇನೆ. ಹೀಗಾಗಿ ಕಾಲುವೆಯ ಸೈಫನ್ ದುರಸ್ತಿ ಶೀಘ್ರ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಕಳಸಾ ಬಂಡೂರಿ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಶಿವಾನಂದ ಮೇಟಿ, ಹಲವಾರು ವರ್ಷಗಳಿಂದ ಕಾಲುವೆ ಸೈಫನ್ ದುರಸ್ತಿಗೆ ರೈತರು ಮನವಿ ಮಾಡಿದರೂ ಸ್ಪಂದಿಸಿರಲಿಲ್ಲ. ಈಭಾಗ ಬರಗಾಲ ಪ್ರದೇಶವೆಂದು ಗುರುತಿಸಿ ಅರೆ ನೀರಾವರಿ ಪದ್ಧತಿಗಾಗಿ ಡ್ಯಾಂ ನಿರ್ಮಾಣ ಸಂದರ್ಭದಲ್ಲಿ ವಿಶೇಷವಾಗಿ ಸೈಫನ್ ನಿರ್ಮಿಸಿ ಶೀಘ್ರ ಕಾಲುವೆ ಸೈಫನ್ ದುರಸ್ತಿ ಮಾಡಬೇಕು ಎಂದರು.

ಶಾಸಕರ ಭರವಸೆಯಿಂದ ರೈತರೆಲ್ಲ ಸೇರಿ ಅಹೋರಾತ್ರಿ ಧರಣಿ ಹಿಂದಕ್ಕೆ ಪಡೆದಿದ್ದೇವೆ ಎಂದು ತಿಳಿಸಿದರು.

ಪಂಚನಗೌಡ ದ್ಯಾಮನಗೌಡರ, ಸೋಮು ರೈನಾಪೂರ ಮಾತನಾಡಿದರು.

ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಉಮೇಶ ಬಾಳಿ, ಸುರೇಶ ಕುರುಬಗಟ್ಟಿ, ಡಿ.ಡಿ.ಟೋಪೋಜಿ, ಅಪ್ಪು ನುಗ್ಗಾನಟ್ಟಿ, ಶೇಖರ ಗೋಕಾವಿ, ಬಸು ಹುರಳಿ, ಮಾಂತೇಶ ಯಕ್ಕೆರಿ, ಪುರಸಭೆ ಮಾಜಿ ಅಧ್ಯಕ್ಷ ಸಿ.ಬಿ.ಬಾಳಿ, ಎಪಿ.ಎಂ.ಸಿ ಅದ್ಯಕ್ಷ ಚಂದ್ರು ಜಂಬ್ರಿ, ಪುಂಡಲೀಕ ಮೇಟಿ, ಅತ್ಯಪ್ಪ ಅಡವಿ, ಮಲ್ಲಿಕಾರ್ಜುನ ದಸ್ತಿ, ನೀರಾವರಿ ಇಲಾಖೆಯ ಅಧಿಕಾರಿಗಳು, ಮುಖಂಡರು, ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-21-1821245582

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.