ಮುನವಳ್ಳಿ: ಪಟ್ಟಣದ ಪುರಸಭೆ ಕಾರ್ಯಾಲಯದ ಸಭಾಭವನದಲ್ಲಿ ಮಂಗಳವಾರ ಸಾಮಾನ್ಯ ಸಭೆ ಜರುಗಿತು.

2026-27ನೇ ಸಾಲಿಗೆ ₹4.05 ಲಕ್ಷ ಮೊತ್ತದ ಉಳಿತಾಯ ಬಜೆಟ್ ಪುರಸಭೆ ಅಧ್ಯಕ್ಷ ಈಶ್ವರ ಕರಿಕಟ್ಟಿ, ಉಪಾಧ್ಯಕ್ಷ ಡಿ.ಡಿ.ಕಿನ್ನೂರಿ ಮಂಡಿಸಿದರು. ಸರ್ವ ಸದಸ್ಯರು ಅನುಮೋದಿಸಿದರು.

2026-27ನೇ ಸಾಲಿನಲ್ಲಿ ₹16.22 ಕೋಟಿ ಜಮೆ ಹಾಗೂ ₹16.18 ಕೋಟಿ ಖುರ್ಚು ಮಾಡಿ ಎಸ್ಎಫ್ಸಿ ಮುಕ್ತನಿಧಿಯಡಿ ರಸ್ತೆ ಕಾಮಗಾರಿಗೆ ₹7 ಲಕ್ಷ, ಚರಂಡಿ ಕಾಮಗಾರಿಗೆ ₹75 ಲಕ್ಷ, ನೀರು ಸರಬರಾಜು ನಿರ್ವಹಣೆಗೆ ₹45 ಲಕ್ಷ, ಬೀದಿದೀಪ ನಿರ್ವಹಣೆಗೆ ₹10 ಲಕ್ಷ , ಘನತ್ಯಾಜ್ಯ ನಿರ್ವಹಣೆಗೆ ₹50 ಲಕ್ಷ, ಕೌನ್ಸಿಲ್ ವೆಚ್ಚ ₹89 ಲಕ್ಷ, ಕಟ್ಟಡ ದುರಸ್ತಿಗೆ ₹45 ಲಕ್ಷ ಹಾಗೂ ಇತರ ಖರ್ಚುಗಳಿಗೆ ₹5 ಲಕ್ಷ ಸೇರಿ ಇನ್ನಿತರ ಅಂದಾಜು ವೆಚ್ಚಗಳಿಗೆ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.

ಬಿಜೆಪಿ ಸದಸ್ಯರಾದ ಸುಬಾಸ ಗೀದಿಗೌಡ್ರ, ಶ್ರೀಕಾಂತ ಮಲಗೌಡ್ರ ಮಾತನಾಡಿ ಸದಸ್ಯರ ಭತ್ತೆ ಪರಿಸಿಲಿಸಬೇಕು. ಗ್ರಾಮ ಪಂಚಾಯತಿ ಆಗಿದ್ದ ಸಂದರ್ಭದಲ್ಲಿ ಇರುವ ಗ್ರಂಥಾಲಯವನ್ನು ಈಗ ಪುರಸಭೆ ಆಗಿ 10 ವರ್ಷ ಆಯಿತು. ಗ್ರಂಥಾಲಯವನ್ನು ಡಿಜಿಟಲ್ ಗ್ರಂಥಾಲಯವಾಗಿ ಪರಿವರ್ತಿಸಬೇಕು. ಪತ್ರಿಕಾ ಭವನವನ್ನು ನಿರ್ಮಿಸಬೇಕು. ವಿವಿಧ ವಾರ್ಡಗಳ ಅಭಿವೃದ್ದಿ ಕಾಮಗಾರಿ ಕುರಿತು ಚರ್ಚಿಸಿ ತ್ವರಿತಗತಿಲ್ಲಿ ಪೂರ್ಣಗೊಳಿಸಲು ಸೂಚಿಸಿದರು.

ಮುಖ್ಯಾಧಿಕಾರಿ ಎಂ.ಎಂ.ತಿಮ್ಮಾಣಿ ಮಾತನಾಡಿ, ಚಾಲನೆಯಲ್ಲಿರುವ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಮುಗಿಸಿ ಹೊಸ ಕಾಮಗಾರಿಗಳಿಗೆ ಟೆಂಡರಗಳ ಮೂಲಕ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪ್ರಾರಂಭಿಸಿಲಾಗುವುದು. ಎಲ್ಲ ಕಾಮಗಾರಿಗಳಿಗೆ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕೆಂದರು.

ಪುರಸಭೆ ಸದಸ್ಯರಾದ ಸಿ.ಬಿ.ಬಾಳಿ, ಶ್ರೀಶೈಲ ನೇಗಿನಾಳ, ಗುರುಶಾಂತ ಚಂದರಗಿ, ಸಮೀವುಲ್ಲಾ ಚೂರಿಖಾನ, ಬಸವರಾಜ ದೊಡ್ಡಮನಿ, ಶೀತಲ್ ಗೋಮಾಡಿ, ಲಲಿತಾ ರೇವಡಗಿ, ರೇವತಿ ಬಾರಕೇರ, ಸಲೀಂಮಲ್ಲಿಕ ಬೆಳವಡಿ, ಕೆ.ಎಚ್.ಹಿರೇಮೇತ್ರಿ, ಶಂಕ್ರವ್ವ ಗೋಕಾಕ, ಎಚ್.ಕೆ.ದನದಮನಿ,ಕಸ್ತೂರಿ ಗಂಗಣ್ಣವರ, ಪುರಸಭೆ ಸರ್ವ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-21-1915660722

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.