ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿನ ಹತ್ಯೆ; ಆರೋಪಿ ಬಂಧನ

Last Updated 4 ಮೇ 2019, 15:24 IST
ಅಕ್ಷರ ಗಾತ್ರ

ಬೆಳಗಾವಿ: ತನ್ನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯ ಮೂರು ವರ್ಷದ ಗಂಡು ಮಗುವನ್ನು ಹತ್ಯೆ ಮಾಡಿದ ಆರೋಪಿ ಪರಶುರಾಮ ಎಸ್‌. ಜಾಧವ (28) ಅವರನ್ನು ಪೊಲೀಸರು ಶನಿವಾರ ರಾಯಬಾಗದಲ್ಲಿ ಬಂಧಿಸಿದ್ದಾರೆ.

ಪರಶುರಾಮ ಅವರು ಲಕ್ಷ್ಮಿ (35) ಅವರ ಜೊತೆ ವಿವಾಹೇತರ ಸಂಬಂಧ ಹೊಂದಿದ್ದರು. ಇದಕ್ಕೂ ಮೊದಲು ಲಕ್ಷ್ಮಿ ಅವರು ಅಶೋಕ ಬಗಾಡೆ ಅವರನ್ನು ವಿವಾಹವಾಗಿದ್ದರು. ಅವರಿಗೆ 3 ವರ್ಷದ ಗಂಡು ಮಗು ಇತ್ತು. ನಂತರ ಲಕ್ಷ್ಮಿ ಅವರು ಪರಶುರಾಮ ಜೊತೆ ಸಂಬಂಧ ಹೊಂದಿದ್ದರು.

‘ತನ್ನ ಆಸ್ತಿಯಲ್ಲಿ ಪಾಲು ಕೇಳಬಾರದೆನ್ನುವ ಉದ್ದೇಶದಿಂದ ಪರಶುರಾಮ ಚಪಾತಿ ಮಾಡಲು ಬಳಸುವ ಲಟ್ಟಣಿಗೆಯಿಂದ ಮಗುವಿನ ತಲೆಗೆ ಹೊಡೆದು ಹತ್ಯೆ ಮಾಡಿದ್ದರು ಎನ್ನುವುದು ವಿಚಾರಣೆಯಿಂದ ತಿಳಿದುಬಂದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರಕುಮಾರ್‌ ರೆಡ್ಡಿ ತಿಳಿಸಿದರು.

ಮಗುವಿನ ತಂದೆ ಅಶೋಕ ಬಗಾಡೆ ಪೊಲೀಸರಿಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT